alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾ ಪಾಲಿಸಿಗೂ ಆಧಾರ್–ಪಾನ್ ಜೋಡಣೆ ಕಡ್ಡಾಯ

ನವದೆಹಲಿ: ಬ್ಯಾಂಕ್ ಖಾತೆ, ಮೊಬೈಲ್ ಮೊದಲಾದವುಗಳಿಗೆ ಆಧಾರ್ ಸಂಖ್ಯೆಯನ್ನು ಜೋಡಣೆ ಮಾಡಬೇಕಿದೆ. ಇದರೊಂದಿಗೆ ನಿಮ್ಮ ಎಲ್ಲಾ ವಿಮಾ ಪಾಲಿಸಿಗಳಿಗೂ ಆಧಾರ್ ಮತ್ತು ಪಾನ್ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ.

ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಿಂದ ಈ ಕುರಿತು ಮಾಹಿತಿ ನೀಡಲಾಗಿದ್ದು, ಪಾಲಿಸಿದಾರರು ಹಣಕಾಸು ಸೇವೆಯನ್ನು ಪಡೆಯಲು ಆಧಾರ್ ಮತ್ತು ಪಾನ್ ಸಂಖ್ಯೆಯನ್ನು ಜೋಡಣೆ ಮಾಡಬೇಕಿದೆ ಎಂದು ತಿಳಿಸಲಾಗಿದೆ.

ಪ್ರಾಧಿಕಾರದ ಸದಸ್ಯ ನಿಲೇಶ್ ಸಾತೀ, 2017 ರ ಹಣಕಾಸು ಅವ್ಯವಹಾರ ತಡೆ ನಿಯಮಾವಳಿ ಅನ್ವಯ ವಿಮಾ ಕಂಪನಿಗಳಿಗೆ ಈ ಕುರಿತು ಸೂಚನೆ ನೀಡಲಾಗಿದೆ. ವಿಮಾ ಪಾಲಿಸಿಗಳಿಗೆ ಆಧಾರ್ ಮತ್ತು ಪಾನ್ ಸಂಖ್ಯೆ ಜೋಡಣೆ ಮಾಡುವಂತೆ ತಿಳಿಸಲಾಗಿದೆ ಎಂದಿದ್ದಾರೆ.

24 ಜೀವ ವಿಮಾ ಮತ್ತು 33 ಸಾಮಾನ್ಯ ವಿಮಾ ಕಂಪನಿಗಳು ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಿಮಾ ಪಾಲಿಸಿಗಳಿಗೂ ಆಧಾರ್ ಲಿಂಕ್ ಮಾಡಬೇಕಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...