alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದು ಮಿಸ್ಡ್ ಕಾಲ್ ಹೇಳುತ್ತೆ ನಿಮ್ಮ ಪಿಎಫ್ ಬ್ಯಾಲೆನ್ಸ್

ಕೆಲಸ ಮಾಡುವ ವೇಳೆ ನಿಯಮಾನುಸಾರ ಪ್ರತಿಯೊಬ್ಬ ಕೆಲಸಗಾರನ ಪಿಎಫ್ ಮೊತ್ತವನ್ನು ಇಪಿಎಫ್ಒನಲ್ಲಿ ಜಮಾ ಮಾಡಬೇಕಾಗುತ್ತದೆ. ಪ್ರತಿ ತಿಂಗಳು ಪಿಎಫ್ ಹೆಸರಿನಲ್ಲಿ ಕಟ್ ಆಗುವ ಹಣ ಖಾತೆಯಲ್ಲಿ ಭದ್ರವಾಗಿರುತ್ತದೆ. ಕೆಲವರು ನಿವೃತ್ತಿ ನಂತ್ರ ಹಣ ಪಡೆದ್ರೆ ಮತ್ತೆ ಕೆಲವರು ಕೆಲಸ ಬಿಟ್ಟ ನಂತ್ರ ಹಣ ಡ್ರಾ ಮಾಡುವ, ವರ್ಗ ಮಾಡುವ ಕೆಲಸ ಮಾಡುತ್ತಾರೆ. ಪಿಎಫ್ ಖಾತೆಯಲ್ಲಿ ಎಷ್ಟು ಹಣವಿದೆ ಎಂಬುದನ್ನು ತಿಳಿಯಲು ಸಾಕಷ್ಟು ವಿಧಾನಗಳಿವೆ. ಅದ್ರಲ್ಲಿ ಮಿಸ್ಡ್ ಕಾಲ್ ಕೂಡ ಒಂದು. ಇದಕ್ಕಾಗಿ ಇಪಿಎಫ್ಒ ನಂಬರ್ ನೀಡಿದೆ.

ಇಪಿಎಫ್ಒ ತನ್ನ ಅಧಿಕೃತ ವೆಬ್ಸೈಟ್ ನಲ್ಲಿ ಪಿಎಫ್ ಚೆಕ್ ಮಾಡುವ ಸೌಲಭ್ಯ ನೀಡಿದೆ. ಇ-ಪಾಸ್ಬುಕ್ ಲಿಂಕ್ ನಿಮಗೆ ವೆಬ್ಸೈಟ್ ನಲ್ಲಿ ಸಿಗಲಿದೆ. ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಹಾಕಬೇಕಾಗುತ್ತದೆ. ನಂತ್ರ ಪಾಸ್ಬುಕ್ ಬಟನ್ ಒತ್ತಬೇಕು. ಅಲ್ಲಿ ನಿಮಗೆ ಬ್ಯಾಲೆನ್ಸ್ ಮೊತ್ತ ಕಾಣಿಸಲಿದೆ.

ಇ.ಪಿ.ಎಫ್.ಒ. ಆ್ಯಪ್ ಮೂಲಕವೂ ಈ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಆ್ಯಪ್ ನಲ್ಲಿ ಕೂಡ ಯುಎಎನ್ ನಂಬರ್ ಹಾಗೂ ಪಾಸ್ವರ್ಡ್ ಹಾಕಬೇಕು.

ಮಿಸ್ಡ್ ಕಾಲ್ ಮೂಲಕ ನೀವು ಸುಲಭವಾಗಿ ಪಿಎಫ್ ಹಣ ನೋಡಬಹುದು. ಇ.ಪಿ.ಎಫ್.ಒ. 011-22901406 ನಂಬರ್ ನೀಡಿದೆ. ನೋಂದಾಯಿತ ಮೊಬೈಲ್ ನಂಬರ್ ಮೂಲಕ 011-22901406ಗೆ ಮಿಸ್ಡ್ ಕಾಲ್ ನೀಡಿದ್ರೆ ನಿಮ್ಮ ಪಿಎಫ್ ಬ್ಯಾಲೆನ್ಸ್ ನಿಮಗೆ ಸಿಗಲಿದೆ.

ಆ್ಯಪ್ ಹಾಗೂ ವೆಬ್ಸೈಟ್ ನ ಮೂಲಕ ಪಿಎಫ್ ಬ್ಯಾಲೆನ್ಸ್ ತಿಳಿದುಕೊಳ್ಳುವುದಕ್ಕಿಂತ ಮಿಸ್ಡ್ ಕಾಲ್ ಸುಲಭ. ಸ್ಮಾರ್ಟ್ಫೋನ್, ಇಂಟರ್ನೆಟ್ ಇಲ್ಲದೆ ಇದನ್ನು ಬಳಸಬಹುದು. ಹಾಗಾಗಿ ಬಹುತೇಕರು ಮಿಸ್ಡ್ ಕಾಲ್ ಮೂಲಕವೇ ಬ್ಯಾಲೆನ್ಸ್ ತಿಳಿಯಲು ಮುಂದಾಗ್ತಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...