alex Certify
ಕನ್ನಡ ದುನಿಯಾ       Mobile App
       

Kannada Duniya

ಐಟಿ ರಿಟರ್ನ್ ಗೆ ಆಧಾರ್ ಬೇಕಿಲ್ಲ: ವೆಬ್ ಸೈಟ್ ನಲ್ಲಿ ಸಿಗ್ತಿದೆ ಬೇರೆ ಆಯ್ಕೆ

ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಪ್ರಕ್ರಿಯೆ ಚುರುಕು ಪಡೆದಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ ಗೆ ಕೊನೆ ದಿನ. ಈ ಮಧ್ಯೆ ಆನ್ಲೈನ್ ನಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವವರಿಗೊಂದು ನೆಮ್ಮದಿಯ ಸುದ್ದಿ. ಆಧಾರ್ ಕಾರ್ಡ್ ಇಲ್ಲದಿರುವವರು ಕೂಡ ಆನ್ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ ಮಾಡಬಹುದು.

ದೆಹಲಿ ಹೈಕೋರ್ಟ್ ಈ ಬಗ್ಗೆ ಮಹತ್ವದ ಆದೇಶ ನೀಡಿದೆ. ಆಧಾರ್ ಕಾರ್ಡ್ ಹೊಂದಿರದ ವ್ಯಕ್ತಿಗಳಿಗೆ ಆನ್ಲೈನ್ ಮೂಲಕ ಆದಾಯ ತೆರಿಗೆ ರಿಟರ್ನ್ ಗೆ ಪ್ರತ್ಯೇಕ ವ್ಯವಸ್ಥೆ ಮಾಡುವಂತೆ ಹೈಕೋರ್ಟ್ ಸಿಬಿಡಿಟಿಗೆ ಸೂಚನೆ ನೀಡಿದೆ. ದೆಹಲಿ ಹೈಕೋರ್ಟ್ ನಲ್ಲಿ ಇದ್ರ ವಿಚಾರಣೆ ಮಾಡ್ತಿರುವ ನ್ಯಾಯಮೂರ್ತಿ ಎಸ್.ರವೀಂದ್ರ ಭಟ್ ಹಾಗೂ ಎ.ಕೆ.ಚಾವ್ಲಾ ನೇತೃತ್ವದ ಪೀಠ, ಸಿಬಿಡಿಟಿ ಪ್ಯಾನ್ ಹಾಗೂ ಆಧಾರ್ ಲಿಂಕ್ ಗೆ ಅವಧಿಯನ್ನು ಮಾರ್ಚ್ 31, 2019 ರವರೆಗೆ ವಿಸ್ತರಣೆ ಮಾಡಿದೆ. ಹಾಗಾಗಿ ಆನ್ಲೈನ್ ರಿಟರ್ನ್ ಸಲ್ಲಿಸಲು ಒಂದು ಆಯ್ಕೆ ನೀಡಬೇಕೆಂದು ಹೇಳಿದೆ.

ಅರ್ಜಿದಾರರ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಅರ್ಜಿದಾರರು ಆದಾಯ ಇಲಾಖೆಗೆ ಈ ಬಗ್ಗೆ ಪ್ರಶ್ನೆ ಮಾಡಿದ್ದರು. ನಮ್ಮ ಬಳಿ ಆಧಾರ್ ಕಾರ್ಡ್ ಇಲ್ಲ. ಹೇಗೆ ರಿಟರ್ನ್ ಮಾಡುವುದು ಎಂಬ ಪ್ರಶ್ನೆಗೆ ಆದಾಯ ಇಲಾಖೆ ಇ-ಮೇಲ್ ಮೂಲಕ ಪ್ರತಿಕ್ರಿಯೆ ನೀಡಿತ್ತು. ಇದಕ್ಕೆ ಯಾವುದೇ ಆಯ್ಕೆಯಿಲ್ಲ. ಬೇಕಾದ್ರೆ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿ ಎಂದಿತ್ತು. ಆದಾಯ ತೆರಿಗೆ ಇಲಾಖೆ ಇ-ಮೇಲ್ ನಂತ್ರ ಅರ್ಜಿದಾರರು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...