alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಬಂಕ್ ಗಳಲ್ಲಿಯೂ ಸಿಗುತ್ತೆ ಕ್ಯಾಶ್

petrol-pump

ನವದೆಹಲಿ: ಕೇಂದ್ರ ಸರ್ಕಾರ 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟ್ ಗಳನ್ನು ರದ್ದುಪಡಿಸಿದ ಬಳಿಕ ಜನ ತೊಂದರೆಗೆ ಈಡಾಗಿದ್ದಾರೆ.

ಬ್ಯಾಂಕ್, ಎ.ಟಿ.ಎಂ., ಪೋಸ್ಟ್ ಆಫೀಸ್ ಗಳಲ್ಲಿ ಹಣ ಪಡೆದುಕೊಳ್ಳಲು ಜನ ಮುಗಿಬಿದ್ದಿದ್ದಾರೆ. ಕಳೆದ 8 ದಿನಗಳಿಂದ ಜನ ತೊಂದರೆಗೆ ಒಳಗಾಗಿರುವುದನ್ನು ಮನಗಂಡಿರುವ ಕೇಂದ್ರ ಸರ್ಕಾರ, ಪೆಟ್ರೋಲ್ ಬಂಕ್ ಗಳಲ್ಲಿಯೂ ಹಣ ಪಡೆದುಕೊಳ್ಳುವ ವ್ಯವಸ್ಥೆ ಕಲ್ಪಿಸಿದೆ. ಆಯ್ದ ಪೆಟ್ರೋಲ್ ಬಂಕ್ ಗಳಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಸ್ವೈಪ್ ಮಾಡಿ ಗ್ರಾಹಕರು ಹಣ ಪಡೆದುಕೊಳ್ಳಬಹುದಾಗಿದೆ.

ಕಾರ್ಡ್ ಸ್ವೈಪ್ ಮಾಡಿ 100 ರೂ. ನೋಟು ಇಲ್ಲವೇ, ಹೊಸ ನೋಟು ಪಡೆದುಕೊಳ್ಳಲು ಅವಕಾಶವಿದ್ದು, ದಿನಕ್ಕೆ ಒಬ್ಬರಿಗೆ 2000 ರೂ. ಮಾತ್ರ ನೀಡಲಾಗುತ್ತದೆ.

ಭಾರತೀಯ ಸ್ಟೇಟ್ ಬ್ಯಾಂಕ್(ಎಸ್.ಬಿ.ಐ) ಈ ಕುರಿತಂತೆ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಹಿಂದೂಸ್ತಾನ್ ಪೆಟ್ರೋಲಿಯಂನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಮೊದಲಿಗೆ ಆಯ್ದ 2500 ಪೆಟ್ರೋಲ್ ಬಂಕ್ ಗಳಲ್ಲಿ ಈ ಸೌಲಭ್ಯ ಕಲ್ಪಿಸಲಿದ್ದು, ನಂತರದಲ್ಲಿ 20,000 ಪೆಟ್ರೋಲ್ ಬಂಕ್ ಗಳಿಗೆ ವಿಸ್ತರಿಸಲಾಗುವುದು. ನವೆಂಬರ್ 24 ರಿಂದ ಈ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...