alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ‘ಆಧಾರ್’ ಸುರಕ್ಷತೆಗಾಗಿ ಮಹತ್ವದ ನಿರ್ಧಾರ ಕೈಗೊಂಡ ಯುಐಡಿಎಐ

ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರ, ಸಾರ್ವಜನಿಕರ ‘ಆಧಾರ್’ ಮಾಹಿತಿಯನ್ನು ಮತ್ತಷ್ಟು ಸುರಕ್ಷಿತವಾಗಿರಿಸಲು ಮಹತ್ವದ ನಿರ್ಧಾರ ಕೈಗೊಂಡಿದೆ. ಶುಕ್ರವಾರದಂದು ಯುಐಡಿಎಐ ಈ ಕುರಿತು ಟ್ವೀಟ್ ಮಾಡಿದೆ.

ಆಧಾರ್ ಗುರುತಿನ ಚೀಟಿಯಷ್ಟೇ ಪ್ರಾಮುಖ್ಯತೆ ಹೊಂದಿರುವ ಇ- ಆಧಾರ್ ಈಗ ಎರಡು ರೀತಿಯಲ್ಲಿ ಲಭ್ಯವಿದ್ದು ಒಂದು ಮಾಮೂಲಿನ ಆಧಾರ್ ಕಾರ್ಡ್ ಆದರೆ ಮತ್ತೊಂದು ಮಾಸ್ಕಡ್ ( ಮರೆಮಾಚಿದ) ಆಧಾರ್ ಆಗಿರುತ್ತದೆ. ಇವುಗಳನ್ನು ಯುಐಡಿಎಐ ನ ಅಧಿಕೃತ ವೆಬ್ಸೈಟ್ eaadaar.uidai.gov.in ಮೂಲಕ ಡೌನ್ಲೋಡ್  ಮಾಡಿಕೊಳ್ಳಬಹುದಾಗಿದೆ.

ಮಾಸ್ಕಡ್ ‘ಆಧಾರ್’ ನಲ್ಲಿ ಆಧಾರ್ ಹೊಂದಿದವರ 12 ಅಂಕಿಗಳ ಪೈಕಿ ಕಡೆಯ ನಾಲ್ಕು ಅಂಕಿಗಳು ಮಾತ್ರ ಕಾಣಿಸಲಿದ್ದು, ಉಳಿದವುಗಳನ್ನು ಮರೆ ಮಾಚಲಾಗಿರುತ್ತದೆ. ಉಳಿದಂತೆ ಫೋಟೋ ಮತ್ತು ಕ್ಯೂಆರ್ ಕೋಡ್ ಇದರ ಮೇಲಿರಲಿದೆ. ಇದರಿಂದ ಆಧಾರ್ ಹೊಂದಿದವರ ಮಾಹಿತಿ ಮತ್ತಷ್ಟು ಸುರಕ್ಷಿತವಾಗಿರಲಿದೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...