alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ಆನ್ಲೈನ್ ನಲ್ಲಿ ಸಿಗಲಿದೆ ಖಾದಿ ಉತ್ಪನ್ನ

ಉತ್ತರ ಪ್ರದೇಶದ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಖಾದಿ ಉತ್ಪನ್ನಗಳ ಆನ್ಲೈನ್ ಮಾರಾಟಕ್ಕೆ ಚಾಲನೆ ನೀಡಿದೆ. ಈ ಸಂಬಂಧ ಇ-ಕಾಮರ್ಸ್ ಕಂಪನಿ ಅಮೆಜಾನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಯುಪಿ ಖಾದಿ ಬ್ರ್ಯಾಂಡ್ ಹೆಸರಿನಲ್ಲಿ ಹಳ್ಳಿ ಹಳ್ಳಿಗಳ ಕಾರ್ಮಿಕರು ತಮ್ಮ ಕರಕುಶಲ ವಸ್ತುಗಳನ್ನು ಆನ್ಲೈನ್ ಮೂಲಕ ದೇಶದ ಜನರಿಗೆ ತಲುಪಿಸಬಹುದಾಗಿದೆ.

ಖಾದಿಯ ಶರ್ಟ್, ಪಂಚೆ, ಟವೆಲ್ ಜೊತೆಗೆ ರುಚಿಕರ ಭಕ್ಷ್ಯಗಳು ಸಿಗಲಿವೆ. ನಗರ ಪ್ರದೇಶಗಳಲ್ಲಿ ಖಾದಿ ಹಾಗೂ ರುಚಿಕರ ಭಕ್ಷ್ಯಗಳಿಗೆ ಬೇಡಿಕೆಯಿದ್ದು, ಉತ್ತರ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಸ್ಥಳೀಯ ಜನರಿಗೆ ಈ ಬಗ್ಗೆ ತರಬೇತಿ ನೀಡಿ, ಉದ್ಯೋಗವಕಾಶ ಸೃಷ್ಟಿ ಮಾಡಲಿದೆ.

ಖಾದಿ ಉದ್ಯಮಿಗಳು ಡಿಜಿಟಲ್ ಸಂಪರ್ಕಕ್ಕೆ ಬಂದಲ್ಲಿ ಭಾರತದಲ್ಲಿ ಬೆಳೆಯುತ್ತಿರುವ ಡಿಜಿಟಲ್ ಆರ್ಥಿಕತೆ ಬಗ್ಗೆ ತಿಳುವಳಿಕೆ ಹೆಚ್ಚಲಿದೆ. ಜೊತೆಗೆ ಅವರ ಆರ್ಥಿಕ ವೃದ್ಧಿಯಾಗಲಿದೆ ಎಂಬುದು ಸರ್ಕಾರದ ಉದ್ದೇಶವಾಗಿದೆ. ಇದ್ರಿಂದ ಖಾದಿ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಸಿಗಲಿದೆ ಎಂದು ಸರ್ಕಾರ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...