alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಶ್‌ಲೆಸ್ ಪ್ರಯಾಣಿಕರಿಗೆ ಬಿಎಂಟಿಸಿಯಿಂದ ಬಂಪರ್ ಕೊಡುಗೆ

‘ಬಿಎಂಟಿಸಿ ನಮ್ಮ ಪಾಸ್’ ಮೂಲಕ ಕ್ಯಾಶ್‌ಲೆಸ್ ಪ್ರಯಾಣ ನಡೆಸುವ ಪ್ರಯಾಣಿಕರು ಪ್ರತಿ ವಹಿವಾಟು ವೇಳೆಗೆ 30 ರೂ. ತನಕ ಶೇ.25 ರಷ್ಟು ಕ್ಯಾಶ್‌ಬ್ಯಾಕ್‌ ಪಡೆಯಲಿದ್ದಾರೆ. ಆದರೊಂದು ಷರತ್ತು. ಅಮೆಜಾನ್ ಪೇ ಮೂಲಕ ಪಾವತಿಸಬೇಕು.

ಬಿಎಂಟಿಸಿಯ ವಜ್ರ ಎಸಿ ಡೈಲಿ ಪಾಸ್‌ಗೆ 147 ರೂ. ವೆಚ್ಚವಾಗುತ್ತದೆ. ಈ ಆಫರ್ ಸೆ.30 ರ ತನಕ ಮಾನ್ಯವಿರುತ್ತದೆ. ಈ ಆಫರ್ ಅವಧಿಯಲ್ಲಿ ಪ್ರತಿ ಬಳಕೆದಾರರಿಗೆ ಕೇವಲ ಎರಡು ಬಾರಿಯಷ್ಟೇ ಅವಕಾಶವಿದ್ದು, ಕ್ಯಾಶ್‌ಬ್ಯಾಕ್ ಅನ್ನು ಮೂರು ದಿನಗಳೊಳಗೆ ಅಮೆಜಾನ್ ಪೇ ಖಾತೆಗೆ ಜಮೆ ಮಾಡಲಾಗುತ್ತದೆ.

ಜೂನ್‌ನಲ್ಲಿ ಬಿಎಂಟಿಸಿಯು ಸೀರಿಸ್-5 ಲ್ಯಾಬ್ಸ್ ಪ್ರೈ.ಲಿ. ಎಂಬ ಬೆಂಗಳೂರು ಮೂಲದ ಸ್ಟಾರ್ಟಪ್ ಜತೆ ಸೇರಿ ಡಿಜಿಟಲ್ ಪಾಸ್ ಸೌಲಭ್ಯವಾದ ‘ಬಿಎಂಟಿಸಿ ನಮ್ಮ ಪಾಸ್’ ಅನ್ನು ಬಿಡುಗಡೆಗೊಳಿಸಿತ್ತು. ಪ್ರಯಾಣಿಕರು www.nammapass.series-5.com ವೆಬ್‌ತಾಣಕ್ಕೆ ಭೇಟಿ ನೀಡಿ ವೈಯಕ್ತಿಕ ವಿವರಗಳನ್ನು ನಮೂದಿಸಿ ಸೆಲ್ಫಿಯನ್ನು ಅಪ್‌ಲೋಡ್ ಮಾಡಬೇಕು. ಬಳಿಕ ಫೋನ್‌ಪೇ, ಪೇಟಿಎಂ ಮತ್ತು ಅಮೆಜಾನ್ ಪೇನಂತಹ ಡಿಜಿಟಲ್ ವ್ಯಾಲೆಟ್‌ಗಳ ಮೂಲಕ ಡೈಲಿ ಪಾಸ್‌ಗೆ ಪಾವತಿಸಬೇಕು.

ಪ್ರತಿದಿನ ಸುಮಾರು 50 ರಷ್ಟು ಪ್ರಯಾಣಿಕರು ಈ ಸೌಲಭ್ಯ ಬಳಸುತ್ತಿದ್ದಾರೆ. ಇದೀಗ ಸೀರಿಸ್-5 ಲ್ಯಾಬ್ಸ್ ಸಂಸ್ಥೆ ಮಾಸಿಕ ಡಿಜಿಟಲ್ ಪಾಸ್ ಹಾಗೂ ಹೆಚ್ಚು ಪಾವತಿ ವ್ಯಾಲೆಟ್‌ಗಳನ್ನು ಪರಿಚಯಿಸಲು ಯೋಜಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...