alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿಗೆ ಶ್ರೀ ಶ್ರೀ ಬ್ರಾಂಡ್ ನಿಂದ ಪೈಪೋಟಿ…!

ಯೋಗ ಗುರು ಬಾಬಾ ರಾಮದೇವ್ ನೇತೃತ್ವದ ಆಯುರ್ವೇದ ಉತ್ಪನ್ನಗಳ ಕಂಪನಿ ಪತಂಜಲಿ ಆಯುರ್ವೇದ ಲಿಮಿಟೆಡ್ ಗೆ ಈಗ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ್ ಅವರಿಂದ ಪೈಪೋಟಿ ಎದುರಾಗಿದೆ. ಶ್ರೀ ಶ್ರೀ ರವಿಶಂಕರ್ ಅವರ FMCG ಮತ್ತು ವೆಲ್ ನೆಸ್ ಬ್ರಾಂಡ್, ಶ್ರೀಶ್ರೀ ತತ್ವ, ಗ್ರಾಹಕರನ್ನು ಸೆಳೆಯಲು ಕಸರತ್ತು ಮಾಡ್ತಿದೆ.

ಆಯುರ್ವೇದ, ಹರ್ಬಲ್ ಹೆಲ್ತ್ ಮತ್ತು ಆರೋಗ್ಯಕ್ಕೆ ಸಂಬಂಧಪಟ್ಟ ಉತ್ತಮ ಗುಣಮಟ್ಟದ ಎಲ್ಲಾ ವಸ್ತುಗಳು ಒಂದೇ ಸೂರಿನಡಿ ದೊರೆಯುವಂತೆ ಶ್ರೀ ಶ್ರೀ ತತ್ವ ಬ್ರಾಂಡ್ ನ ಮಳಿಗೆ ತೆರೆಯುತ್ತಿರುವುದಾಗಿ ಸಂಸ್ಥೆ ತಿಳಿಸಿದೆ. ಭಾರತದಲ್ಲಿ ಮುಂದಿನ 2 ವರ್ಷಗಳ ಅವಧಿಯಲ್ಲಿ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್, 1000 ಮಳಿಗೆಗಳನ್ನು ಆರಂಭಿಸಲಿದೆ.

ಮೊದಲು ಶ್ರೀ ಶ್ರೀ ತತ್ವ ಬ್ರಾಂಡ್ ಅಡಿಯಲ್ಲಿ 2003ನೇ ಇಸ್ವಿಯಲ್ಲಿ ಆಯುರ್ವೇದ ಔಷಧಗಳನ್ನು ಬಿಡುಗಡೆ ಮಾಡಲಾಗಿತ್ತು. ನಂತರ ಪರ್ಸನಲ್ ಕೇರ್, ಫುಡ್, ಸ್ಟೇಪಲ್ಸ್ ಹಾಗೂ ಗೃಹೋಪಯೋಗಿ ವಸ್ತುಗಳ ವಿಭಾಗಕ್ಕೂ ಆರ್ಟ್ ಆಫ್ ಲಿವಿಂಗ್ ಪ್ರವೇಶಿಸಿತ್ತು. ಇನ್ನೊಂದೆಡೆ ಬಾಬಾ ರಾಮ್ ದೇವ್ ಅವರ ಪತಂಜಲಿ, ಪುರುಷರು ಮತ್ತು ಮಹಿಳೆಯರಿಗಾಗಿ ಸ್ವದೇಶಿ ಉಡುಪುಗಳನ್ನು ಪರಿಚಯಿಸಲು ಸಿದ್ಧತೆ ನಡೆಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...