alex Certify
ಕನ್ನಡ ದುನಿಯಾ       Mobile App
       

Kannada Duniya

ಮದ್ಯ ಖರೀದಿಗೂ ಆಧಾರ್ ಕಾರ್ಡ್ ಕಡ್ಡಾಯ

ಪ್ಯಾನ್ ಕಾರ್ಡ್ ಆಯ್ತು, ಮೊಬೈಲ್ ಸಿಮ್ ಆಯ್ತು ಈಗ ಮದ್ಯದ ಸರದಿ. ಪಬ್ ಗಳಿಗೆ ಹೋಗಿ ಬೇಕಾದಷ್ಟು ಮದ್ಯ ಖರೀದಿ ಮಾಡೋದು ಇನ್ಮುಂದೆ ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ ಪಬ್ ಗಳಿಗೆ ಹೋಗಿ ಮದ್ಯ ಖರೀದಿ ಮಾಡಲು ಗುರುತಿನ ಚೀಟಿ ರೂಪದಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ.

ಪಬ್ ಗಳಲ್ಲಿ ಮದ್ಯದ ಜೊತೆಗೆ ಡ್ರಗ್ಸ್ ಸೇರಿದಂತೆ ನಶೆಯ ಪದಾರ್ಥಗಳನ್ನು ಮಾರಾಟ ಮಾಡಲಾಗ್ತಿದೆ. ಇತ್ತೀಚೆಗೆ ದೊಡ್ಡ ರಾಕೆಟ್ ಒಂದು ಪೊಲೀಸ್ ಬಲೆಗೆ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಪಬ್ ಗಳಿಗೆ ಆಧಾರ್ ಕಾರ್ಡ್ ಅನಿವಾರ್ಯ ಮಾಡಿದೆ.

ಪಬ್ ಮಾಲೀಕರಿಗೆ ಈ ಬಗ್ಗೆ ನೊಟೀಸ್ ಜಾರಿಗೊಳಿಸಿದೆ. ಮದ್ಯ ಖರೀದಿಗೆ ಬರುವ ಗ್ರಾಹಕರಿಗೆ ಆಧಾರ್ ಕಾರ್ಡನ್ನು ಗುರುತಿನ ಚೀಟಿ ರೂಪದಲ್ಲಿ ಕಡ್ಡಾಯಗೊಳಿಸಿ. ಒಂದು ವೇಳೆ ಗ್ರಾಹಕರು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ ಅವರಿಗೆ ಪಬ್ ಗೆ ಪ್ರವೇಶ ನೀಡಬೇಡಿ ಎಂದು ಸೂಚಿಸಿದೆ.

ಪಬ್ ಮಾಲೀಕರಿಗೆ ಪ್ರತ್ಯೇಕ ನೋಂದಣಿ ಬುಕ್ ಇಟ್ಟಕೊಳ್ಳುವಂತೆ ಸೂಚನೆ ನೀಡಲಾಗಿದೆ. ಪಬ್ ಗೆ ಬರುವ ಜನರ ಬಗ್ಗೆ ಸಂಪೂರ್ಣ ಮಾಹಿತಿ ಇಡುವಂತೆ ಸರ್ಕಾರ ಸೂಚನೆ ನೀಡಿದೆ. ಇದ್ರಿಂದ ಯಾರು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದಾರೆನ್ನುವ ಬಗ್ಗೆ ಸುಲಭವಾಗಿ ಮಾಹಿತಿ ಕಲೆ ಹಾಕಬಹುದೆಂಬುದು ಅಬಕಾರಿ ಇಲಾಖೆ ಉದ್ದೇಶವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...