alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಬಿಚ್ಚಿ ನೋಡಿದ ತಾಂತ್ರಿಕ ಸಿಬ್ಬಂದಿಗೆ ಶಾಕ್…!

ಎಟಿಎಂ ನಲ್ಲಿ ತುಂಬಿಸಿದ್ದ 29 ಲಕ್ಷ ರೂ. ಪೈಕಿ ಸುಮಾರು 12 ಲಕ್ಷ 38 ಸಾವಿರ ರೂ. ಮೌಲ್ಯದ ನೋಟುಗಳು ಇಲಿಗಳಿಗೆ ಆಹಾರವಾಗಿರುವ ಘಟನೆ ಅಸ್ಸಾಂನ ಟಿನ್ಸುಕಿಯಾ ಜಿಲ್ಲೆಯಲ್ಲಿ ನಡೆದಿದೆ.

ಮೇ 19 ರಂದು ಲಾಯಿಪುಲಿ ಏರಿಯಾದಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ನಲ್ಲಿ 29 ಲಕ್ಷ ರೂ.ಗಳನ್ನು ತುಂಬಿಸಲಾಗಿತ್ತು. ಅದೇ ದಿನ ಎಟಿಎಂ ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದು, ಸ್ಥಳೀಯರು ಅಧಿಕಾರಿಗಳ ಗಮನಕ್ಕೆ ತಂದರೂ ಅವರುಗಳು ನಿರ್ಲಕ್ಷ್ಯ ವಹಿಸಿದ್ದಾರೆ.

ಜೂನ್ 11 ರಂದು ಎಟಿಎಂ ರಿಪೇರಿಗೆ ತೆರಳಿದ್ದ ತಾಂತ್ರಿಕ ಸಿಬ್ಬಂದಿ ಅದನ್ನು ತೆರೆದು ನೋಡಿ ಅವಾಕ್ಕಾಗಿದ್ದಾರೆ. ಲಕ್ಷಾಂತರ ರೂ. ಮೌಲ್ಯದ ನೋಟುಗಳು ಚಿಂದಿ ಚಿಂದಿಯಾಗಿದ್ದು, ಜೊತೆಗೆ 4 ಇಲಿಗಳು ಎಟಿಎಂ ಒಳಗೆ ಸೇರಿಕೊಂಡಿರುವುದು ಕಂಡುಬಂದಿದೆ.

ಕೂಡಲೇ ಸ್ಥಳಕ್ಕಾಗಮಿಸಿದ ಬ್ಯಾಂಕ್ ಅಧಿಕಾರಿಗಳು, ಮಿಕ್ಕ ಹಣವನ್ನು ಎಣಿಕೆ ಮಾಡಿದ್ದು, 29 ಲಕ್ಷ ರೂ. ಗಳ ಪೈಕಿ 12 ಲಕ್ಷ 38 ಸಾವಿರ ರೂ. ಇಲಿಗಳಿಗೆ ಆಹಾರವಾಗಿರುವುದು ಬೆಳಕಿಗೆ ಬಂದಿದೆ.

ಆದರೆ ಘಟನೆ ಕುರಿತು ಸ್ಥಳೀಯರು ಅನುಮಾನ ವ್ಯಕ್ತಪಡಿಸುತ್ತಿದ್ದು, ಮೇ 19 ರಂದೇ ಎಟಿಎಂ ಸ್ಥಗಿತಗೊಂಡಿರುವ ಕುರಿತು ಮಾಹಿತಿ ನೀಡಿದ್ದರೂ ಜೂನ್ 11 ರ ವರೆಗೆ ವಿಳಂಬಿಸಿದ್ದೇಕೆ ಎಂದು ಪ್ರಶ್ನಿಸುತ್ತಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...