alex Certify
ಕನ್ನಡ ದುನಿಯಾ       Mobile App
       

Kannada Duniya

10 ರೂ. ಕಾಯಿನ್ ಚಲಾವಣೆ ಕುರಿತು ಗೊಂದಲವಿರುವವರು ತಪ್ಪದೇ ಈ ಸುದ್ದಿ ಓದಿ

ಮುಂಬರುವ ಸಮಯದಲ್ಲಿ 10 ರೂಪಾಯಿ ನೋಟು ಬಂದ್ ಆಗಲಿದೆ. ಈ ಜಾಗವನ್ನು 10 ರೂಪಾಯಿ ನಾಣ್ಯ ಪಡೆಯಲಿದೆ. ಕೇಂದ್ರ ಸರ್ಕಾರ ಈ ಮಾಹಿತಿಯನ್ನು ಶುಕ್ರವಾರ ಹೈಕೋರ್ಟ್ ಗೆ ನೀಡಿದೆ.

ಕೇಂದ್ರ ಸರ್ಕಾರಿ ಪರ ವಕೀಲ ಸಂಜಯ್ ಕೋರ್ಟ್ ಮುಂದೆ ಈ ಬಗ್ಗೆ ಹೇಳಿಕೆ ನೀಡಿದ್ದಾರೆ. 10 ರೂಪಾಯಿ ನೋಟಿನ ಜಾಗವನ್ನು ನಾಣ್ಯ ಪಡೆಯಲಿದೆ. 20 ಹಾಗೂ 50 ರೂಪಾಯಿ ನೋಟನ್ನು ನೇತ್ರಹೀನರು ಸುಲಭವಾಗಿ ಪತ್ತೆ ಹಚ್ಚುತ್ತಾರೆ ಎಂದು ಸಂಜಯ್ ಹೇಳಿದ್ದಾರೆ.

ಹೊಸ ನೋಟುಗಳನ್ನು ನೇತ್ರಹೀನರಿಗೆ ಪತ್ತೆ ಹಚ್ಚಲು ಕಷ್ಟವಾಗ್ತಿದೆ ಎಂದು ಹೈಕೋರ್ಟ್ ನಲ್ಲಿ ಸಾರ್ವಜನಿಕ ಅರ್ಜಿ ಸಲ್ಲಿಸಲಾಗಿತ್ತು. ಇದ್ರ ವಿಚಾರಣೆ ನಡೆಸಿದ ಕೋರ್ಟ್ ನಾಣ್ಯಗಳನ್ನು ಬೇರೆಯಾಗಿ ಗುರುತಿಸುವುದು ಹೇಗೆ ಎನ್ನುವ ಬಗ್ಗೆ ಅಫಿಡೆವಿಟ್ ಸಲ್ಲಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

ಮಾರ್ಚ್ 7ರಂದು ಮುಂದಿನ ವಿಚಾರಣೆ ನಡೆಯಲಿದೆ. ಈ ವೇಳೆ ಕೆಲ ನೇತ್ರಹೀನರನ್ನು ಕೋರ್ಟ್ ಗೆ ಕರೆಸಿ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...