alex Certify
ಕನ್ನಡ ದುನಿಯಾ       Mobile App
       

Kannada Duniya

ವಿತ್ತ ಕ್ರಾಂತಿಗೆ ವಿಲವಿಲ ಎಂದ ಜನ ಸಾಮಾನ್ಯರು

bank-rush-n

ಹಣ ಪಡೆಯಲು ಕ್ಯೂನಲ್ಲಿ ನಿಂತಿದ್ದ ವೃದ್ಧರ ಸಾವು, ತಮ್ಮ ಬಳಿ ಇರುವ ನೋಟುಗಳಿಗೆ ಬೆಲೆ ಇಲ್ಲ ಎಂದು ಮಹಿಳೆ ಆತ್ಮಹತ್ಯೆ. ನೋಟು ಬದಲಾವಣೆಗೆ ನೂಕುನುಗ್ಗಲು, ಜಗಳ, ಹೊಡೆದಾಟ, ಕೂಡಿಟ್ಟ ಹಣ ಏನು ಮಾಡಬೇಕೆಂದು ತೋಚದೇ ಭಿಕ್ಷುಕನ ಚಿಂತೆ, ಹಳೆಯ ನೋಟು ಪಡೆಯದ ಕಾರಣ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ, ಕಟ್ಟಲು ತಂದ ಹಣ ಕಳವು….

ಕಳೆದ 2 ದಿನಗಳಿಂದ ಇಂತಹ ಸುದ್ದಿಯೇ ಹೆಚ್ಚಾಗಿ ಕೇಳಿಬರುತ್ತಿವೆ. ಈ ಎಲ್ಲಾ ಪ್ರಕರಣಗಳಲ್ಲಿ ತೊಂದರೆ ಅನುಭವಿಸಿರುವುದು ಜನಸಾಮಾನ್ಯರು. 500 ರೂ. 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಪಡಿಸಿರುವುದಕ್ಕೆ ದೇಶದೆಲ್ಲೆಡೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇದು ಆರ್ಥಿಕ ಸುಧಾರಣೆ ನಿಟ್ಟಿನಲ್ಲಿ ಕೈಗೊಂಡ ಪ್ರಮುಖ ನಿರ್ಧಾರ. ಬ್ಲಾಕ್ ಮನಿ ಬಗ್ಗುಬಡಿಯಲು ತೆಗೆದುಕೊಂಡ ದಿಟ್ಟ ಕ್ರಮ ಎಂದು ಮೆಚ್ಚುಗೆ ವ್ಯಕ್ತವಾಗಿದೆ.

ಇದರ ಬೆನ್ನಲ್ಲೇ ನೋಟು ಬದಲಾವಣೆ ಮೊದಲಾದ ಗೊಂದಲಗಳಿಂದ ಜನ ಹೈರಾಣಾಗಿದ್ದಾರೆ. ಕೈಯಲ್ಲಿ ಕಾಸಿದ್ದರೂ ಅದಕ್ಕೆ ಬೆಲೆಯಿಲ್ಲ. ಅನಿವಾರ್ಯವಾಗಿ ತಮ್ಮಲ್ಲಿರುವ ನೋಟುಗಳನ್ನು ಖಾತೆಗೆ ಜಮಾ ಮಾಡಬೇಕು. ವಿನಿಮಯ ಮಾಡಿಕೊಳ್ಳಬೇಕಿದೆ. ಈ ಧಾವಂತದಲ್ಲಿ ಮತ್ತು ಗೊಂದಲಗಳಿಂದಾಗಿ ಜನ ಸಾಮಾನ್ಯರು ಹೈರಾಣಾಗಿದ್ದಾರೆ. ಡಿಸೆಂಬರ್ ಅಂತ್ಯದವರೆಗೂ ಕಾಲಾವಕಾಶವಿದೆ ಎಂದು ಹೇಳಿದ್ದರೂ, ಜನರಿಗೆ ಕಾಯುವ ತಾಳ್ಮೆ ಇಲ್ಲದಂತಾಗಿದೆ. ಕೈಯಲ್ಲಿರುವ ನೋಟುಗಳು ಖಾಲಿಯಾಗಬೇಕು ಇಲ್ಲವೇ ಬದಲಾಗಬೇಕು ಎಂಬುದು ಜನರ ಬಯಕೆ. ಪರಿಣಾಮ ಬ್ಯಾಂಕ್, ಪೋಸ್ಟ್ ಆಫೀಸ್, ಎ.ಟಿಎಂ. ಸೆಂಟರ್ ಗಳು ಜನರಿಂದ ತುಂಬಿ ತುಳುಕುತ್ತಿವೆ.

ಸರದಿ ಸಾಲಿನಲ್ಲಿ ನಿಂತು ಹಣ ಪಡೆಯುವ ಇಲ್ಲವೇ ಕಟ್ಟುವ ಧಾವಂತದಲ್ಲಿ ಜನ ಬಳಲಿದ್ದಾರೆ. ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರೊಂದಿಗೆ ನಿತ್ಯದ ಅಗತ್ಯ ಖರ್ಚುಗಳಿಗೆ ಚಿಲ್ಲರೆ ಸಿಗದೇ ಪರದಾಟ ಶುರುವಾಗಿದೆ. ಚಿಲ್ಲರೆ ಸಮಸ್ಯೆ ಎದುರಾಗಿದೆ. ಒಂದೆರಡು ದಿನಗಳಲ್ಲಿ ಈ ಸಮಸ್ಯೆ ಬಗೆಹರಿಯುತ್ತದೆ ಎನ್ನಲಾಗಿದ್ದರೂ ಅಂತಹ ಲಕ್ಷಣಗಳು ಕಾಣಿಸುತ್ತಿಲ್ಲ. ಮೊದಲ ದಿನ ಕಂಡು ಬಂದ ಚಿತ್ರಣವೇ 2 ನೇ ದಿನವೂ ಕಂಡು ಬಂದಿದೆ.

ಹೊಸ ನೋಟುಗಳು ಎ.ಟಿ.ಎಂ.ಗಳಲ್ಲಿ ಸಿಗಲು ಇನ್ನು ಸಮಯಾವಕಾಶ ಬೇಕಿದೆ. ಹೊಸ ನೋಟುಗಳ ಆಕಾರದಲ್ಲಿ ಬದಲಾವಣೆ ಇರುವುದರಿಂದ ಎ.ಟಿ.ಎಂ. ಯಂತ್ರಗಳಿಗೆ ಹೊಂದಾಣಿಕೆಯಾಗುತ್ತಿಲ್ಲ. 100 ರೂ. ಮುಖಬೆಲೆಯ ನೋಟುಗಳಷ್ಟೇ ಬರುತ್ತಿವೆ. ಜನ ಸಾಮಾನ್ಯರು ಇನ್ನು ಒಂದೆರಡು ದಿನ ತೊಂದರೆ ಅನುಭವಿಸಬೇಕಿದೆ. ಆ ನಂತರದಲ್ಲಿ ನಿಧಾನಗತಿಯಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎನ್ನಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...