alex Certify
ಕನ್ನಡ ದುನಿಯಾ       Mobile App
       

Kannada Duniya

ನೋಟು ನಿಷೇಧಕ್ಕೆ ಕಂಗೆಟ್ಟು ವಲಸೆ ಹೊರಟ ಜನ..!

dharavi-2

ನೋಟು ನಿಷೇಧವಾಗಿ 33 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಮಾತ್ರ ಬದಲಾಗಲಿಲ್ಲ. ಎರಡು ದಿನ ಬ್ಯಾಂಕ್ ಬಂದ್ ಇತ್ತು. ಭಾನುವಾರ ಕೆಲಸಕ್ಕೆ ರಜೆ ಇದ್ದಿದ್ದರಿಂದ ಜನರು ಎಟಿಎಂ ಮುಂದೆ ಕ್ಯೂನಲ್ಲಿ ನಿಂತು ಚಿಲ್ಲರೆ ಪಡೆಯಲು ಪರದಾಡಿದ್ದಾರೆ. ನೋಟು ನಿಷೇಧದಿಂದಾಗಿ ಪ್ರತಿದಿನದ ಅಗತ್ಯತೆಗಳನ್ನು ಪೂರೈಸಿಕೊಳ್ಳೋದು ಕಷ್ಟವಾಗ್ತಿದೆ.

ಏಷ್ಯಾದ ದೊಡ್ಡ ಕೊಳಗೇರಿ ಸ್ಥಳಗಳಲ್ಲಿ ಒಂದಾಗಿರುವ ಮುಂಬೈ ಧಾರಾವಿ ಜನರ ಪರಿಸ್ಥಿತಿ ಕೂಡ ಭಿನ್ನವಾಗಿಲ್ಲ. ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ತಿದ್ದ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ನಗದು ಕೊರತೆಯಿಂದಾಗಿ ಕಾರ್ಮಿಕರು ಹಾಗೂ ಕೂಲಿ ಕೆಲಸಗಾರರು ಕಂಗೆಟ್ಟಿದ್ದಾರೆ.

ದಿನನಿತ್ಯದ ಕೆಲಸದಲ್ಲಿ ಭಾರೀ ಬದಲಾವಣೆಯಾಗಿದೆ. ಬೀದಿ ಬದಿ ವ್ಯಾಪಾರಿಗಳು, ಐಸ್ ಕ್ರೀಂ ವ್ಯಾಪಾರಿಗಳು, ಗೊಂಬೆ ಮಾರಾಟಗಾರರು ಸೇರಿದಂತೆ ಸಣ್ಣ ಉದ್ಯೋಗಿಗಳ ವ್ಯಾಪಾರಿಗಳಿಗೆ ದೊಡ್ಡ ಮಟ್ಟದಲ್ಲಿ ನಷ್ಟವಾಗ್ತಿದೆ. ಪ್ರತಿದಿನ 500 ರೂಪಾಯಿ ಗಳಿಸ್ತಾ ಇದ್ದ ವ್ಯಾಪಾರಿಗಳ ಗಳಿಕೆ ಈಗ 300 ರೂಪಾಯಿಗೆ ಬಂದು ನಿಂತಿದೆ. ಬಿಹಾರ, ಯುಪಿಯಿಂದ ಕೆಲಸಕ್ಕಾಗಿ ವಲಸೆ ಬಂದಿದ್ದ ಜನರು ವ್ಯಾಪಾರವಿಲ್ಲದೆ ವಾಪಸ್ ತಮ್ಮ ತವರಿನತ್ತ ಮುಖ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...