alex Certify
ಕನ್ನಡ ದುನಿಯಾ       Mobile App
       

Kannada Duniya

2000 ರೂ. ನೋಟ್ ಬ್ಯಾನ್ ಕುರಿತು ಹೀಗಂದ್ರು ಜೇಟ್ಲಿ

ನವದೆಹಲಿ: ಕಳೆದ ವರ್ಷ ನವೆಂಬರ್ ನಲ್ಲಿ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ಬಳಿಕ, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳೊಂದಿಗೆ ಹೊಸ 500 ರೂ. ಮತ್ತು 2000 ರೂ. ನೋಟ್ ಗಳು ಚಲಾವಣೆಗೆ ಬಂದಿವೆ.

ಇದರೊಂದಿಗೆ ಹೊಸ 200 ರೂ. ಮತ್ತು 50 ರೂ. ನೋಟ್ ಗಳು ಶೀಘ್ರವೇ ಚಲಾವಣೆಗೆ ಬರಲಿವೆ. ಈ ನಡುವೆ 2000 ರೂ. ನೋಟ್ ಬ್ಯಾನ್ ಆಗುತ್ತೆ ಎಂಬ ವದಂತಿಗಳು ಹಬ್ಬಿವೆ.

ಇಂತಹ ಗೊಂದಲಗಳಿಗೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ತೆರೆ ಎಳೆದಿದ್ದಾರೆ. 2000 ರೂ. ನೋಟ್ ನಿಷೇಧಿಸುವ ಯಾವುದೇ ಚಿಂತನೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

200 ರೂ. ಮುಖಬೆಲೆಯ ನೋಟ್ ಗಳನ್ನು ಬಿಡುಗಡೆ ಮಾಡುವ ಬಗ್ಗೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್.ಬಿ.ಐ.) ಕ್ರಮ ಕೈಗೊಳ್ಳಲಿದೆ. 200 ರೂ. ನೋಟ್ ಚಲಾವಣೆಗೆ ಬಂದರೆ, ಚಿಲ್ಲರೆ ಸಮಸ್ಯೆಯ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದ್ದಾರೆ.

ಹೊಸ ನೋಟ್ ಮುದ್ರಣ, ಬಿಡುಗಡೆ ದಿನಾಂಕ ಆರ್.ಬಿ.ಐ.ಗೆ ಬಿಟ್ಟ ವಿಚಾರವಾಗಿದೆ. 2000 ರೂ. ನೋಟ್ ಬ್ಯಾನ್ ಮಾಡುವ ಚಿಂತನೆಯಂತೂ ಇಲ್ಲವೆಂದು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...