alex Certify
ಕನ್ನಡ ದುನಿಯಾ       Mobile App
       

Kannada Duniya

NRI ಗಳು, ವಿಸಿಟರ್ಸ್ ಗೆ ಮಾತ್ರ ಈ ಸೌಲಭ್ಯ

ಮೊಬೈಲ್ ಫೋನ್ ಗಳಿಗೆ ಆಧಾರ್ ರಹಿತ ವೆರಿಫಿಕೇಶನ್ ಸೌಲಭ್ಯವನ್ನು ಕೇಂದ್ರ ಸರ್ಕಾರ ಒದಗಿಸುತ್ತಿದೆ. ಆದ್ರೆ ಇದು ಕೇವಲ ಎನ್ ಆರ್ ಐಗಳು ಮತ್ತು ವಿದೇಶಿ ಪ್ರವಾಸಿಗರಿಗೆ ಮಾತ್ರ ಲಭ್ಯವಾಗಲಿದೆ. ಉಳಿದವರಿಗೆ ಆಧಾರ್ ಮೂಲಕ ಮೊಬೈಲ್ ವೆರಿಫಿಕೇಶನ್ ಅನ್ನು ಸರಳಗೊಳಿಸಲಾಗಿದೆ.

ಇದಕ್ಕಾಗಿ ವನ್ ಟೈಮ್ ಪಾಸ್ವರ್ಡ್, ಆ್ಯಪ್, ವಾಯ್ಸ್ ರೆಕಗ್ನಿಶನ್ ಸಿಸ್ಟಮ್ ಅಳವಡಿಸಲಾಗಿದೆ. ಆಧಾರ್ ನೋಂದಣಿ ವೇಳೆ ನಮೂದಿಸದ ಮೊಬೈಲ್ ಸಂಖ್ಯೆಯನ್ನು ಕೂಡ ಸಾರ್ವಜನಿಕರು ದೃಢೀಕರಿಸಬಹುದಾಗಿದೆ. ಆಧಾರ್ ಜೊತೆಗೆ ನೋಂದಣಿ ಮಾಡಿರುವ ಮೊಬೈಲ್ ನಂಬರ್ ಮೂಲಕ ಉಳಿದ ಸಂಖ್ಯೆಗಳನ್ನು ಕೂಡ ವೆರಿಫೈ ಮಾಡಬಹುದು.

ಹಿರಿಯ ನಾಗರಿಕರು ಮತ್ತು ವಿಕಲಚೇತನರಿಗೆ ಮನೆ ಬಾಗಿಲಲ್ಲೇ ವೆರಿಫಿಕೇಶನ್ ಮಾಡಿಕೊಡಲಾಗುತ್ತದೆ. ಟೆಲಿಕಾಂ ಸಂಸ್ಥೆಗಳು ಕೆಲವೇ ಸೆಂಟರ್ ಗಳನ್ನು ತೆರೆದು ಗ್ರಾಹಕರನ್ನು ಪೀಡಿಸುತ್ತಿರುವ ಬಗ್ಗೆ ದೂರು ಬಂದಿತ್ತು. ಹಾಗಾಗಿ ಕೇಂದ್ರ ಸರ್ಕಾರ ವೆರಿಫಿಕೇಶನ್ ಪ್ರಕ್ರಿಯೆಯನ್ನು ಸರಳಗೊಳಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...