alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ನಂತ್ರ ನೋಕಿಯಾ 8110 ಫೋನ್ ನಲ್ಲೂ ಬಳಸಬಹುದು ವಾಟ್ಸಾಪ್

ಜಿಯೋ ಫೋನ್ ವಾಟ್ಸಾಪ್ ಸಪೋರ್ಟ್ ಮಾಡುವ ಫೀಚರ್ ಫೋನ್ ಬಿಡುಗಡೆಗೆ ಸಿದ್ಧವಾಗಿದೆ. ವಾಟ್ಸಾಪ್ ಬೆಂಬಲಿರುವ ಜಿಯೋಫೋನ್-2 ಮುಂದಿನ ತಿಂಗಳು ಗ್ರಾಹಕರ ಕೈಗೆ ಸಿಗಲಿದೆ. ಈ ಮಧ್ಯೆ ನೋಕಿಯಾ ಹ್ಯಾಂಡ್ ಸೆಟ್ ತಯಾರಿಕಾ ಕಂಪನಿ ಹೆಚ್ಎಂಡಿ ಗ್ಲೋಬಲ್ ಕೂಡ ವಾಟ್ಸಾಪ್ ಸಪೋರ್ಟ್ ಮಾಡುವ ಮೊಬೈಲ್ ಮಾರುಕಟ್ಟೆಗೆ ತರಲು ಸಿದ್ಧವಾಗಿದೆ.

ಯಸ್, ನೋಕಿಯಾ 8110 4ಜಿ ಫೋನ್ ನಲ್ಲಿ ವಾಟ್ಸಾಪ್ ಬಳಸಬಹುದಂತೆ. ಹಿಂದೆ ತುಂಬಾ ಪ್ರಸಿದ್ಧವಾಗಿದ್ದ ನೋಕಿಯಾ 8110 ಫೀಚರ್ ಫೋನ್ ವಾಟ್ಸಾಪ್ ಸಪೋರ್ಟ್ ಮಾಡಲಿದೆ ಎಂದು ಕಂಪನಿ ಹೇಳಿದೆ.

ನೋಕಿಯಾ ಕೂಡ ಜಿಯೋ ಆಪರೇಟಿಂಗ್ ಸಿಸ್ಟಂ ಮೂಲಕವೇ ಕಾರ್ಯ ನಿರ್ವಹಿಸುತ್ತದೆ. ಜಿಯೋ ಹಾಗೂ ನೋಕಿಯಾ KaiOS ಅವಲಂಬಿಸಿದೆ. ಕೆಲ ದಿನಗಳ ಹಿಂದೆಷ್ಟೇ KaiOS, ಗೂಗಲ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಒಪ್ಪಂದದ ಮೇರೆಗೆ ಫೀಚರ್ ಫೋನ್ ಗಳಿಗೂ ವಾಟ್ಸಾಪ್ ನೀಡ್ತಿದೆ. ಮುಂದಿನ ದಿನಗಳಲ್ಲಿ ಜಿಯೋ ಫೋನ್ ನಲ್ಲಿ  ಗೂಗಲ್ ಅಪ್ಲಿಕೇಷನ್ ಗಳನ್ನು ಬಳಸುವ ಸೌಲಭ್ಯ ಸಿಗಲಿದೆ.

ಈ ವರ್ಷ ನೋಕಿಯಾ 8110 ಫೋನ್ ಬಿಡುಗಡೆ ಮಾಡಿತ್ತು. ಈ ಫೋನ್ ನಲ್ಲಿ ಗೂಗಲ್ ಸರ್ಚ್, ಗೂಗಲ್ ಅಸಿಸ್ಟೆಂಟ್ ಹಾಗೂ ಗೂಗಲ್ ಮ್ಯಾಪ್ ಬಳಸಬಹುದು. ಇನ್ಮುಂದೆ ವಾಟ್ಸಾಪ್ ಬೆಂಬಲಿಸಲಿದೆ ಎಂದು ಕಂಪನಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...