alex Certify
ಕನ್ನಡ ದುನಿಯಾ       Mobile App
       

Kannada Duniya

8000 ರೂ. ಇಳಿಕೆಯಾಗಿದೆ ಈ ಸ್ಮಾರ್ಟ್ ಫೋನ್ ಬೆಲೆ

ಭಾರತದಲ್ಲಿ ನೋಕಿಯಾ 8 ಹಾಗೂ ನೋಕಿಯಾ 5 ಸ್ಮಾರ್ಟ್ ಫೋನ್ ಗಳ ಬೆಲೆಯಲ್ಲಿ ಭಾರೀ ಕಡಿತ ಮಾಡಲಾಗಿದೆ. ಬಾರಿಲೋನಾದಲ್ಲಿ ಫೆಬ್ರವರಿ 26ರಿಂದ ಆರಂಭವಾಗಲಿರೋ ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನಲ್ಲಿ ನೋಕಿಯಾ ತನ್ನ ಹೊಸ ಮೊಬೈಲ್ ಗಳನ್ನು ಲಾಂಚ್ ಮಾಡಲಿದೆ.

ಅದಕ್ಕೂ ಮುನ್ನ ಈಗಾಗ್ಲೇ ಮಾರುಕಟ್ಟೆಯಲ್ಲಿರೋ ಸ್ಮಾರ್ಟ್ ಫೋನ್ ಬೆಲೆಯಲ್ಲಿ ಕಡಿತ ಮಾಡಿದೆ. ಭಾರತದಲ್ಲಿ ನೋಕಿಯಾ 8 ಮೊಬೈಲ್ ಬೆಲೆ 36,999 ರೂಪಾಯಿ ಇತ್ತು. ಈಗ 8000 ರೂಪಾಯಿ ಕಡಿತ ಮಾಡಿದ್ದು, 28,999 ರೂಪಾಯಿ ಆಗಿದೆ.

12,499 ರೂಪಾಯಿ ಮೌಲ್ಯದ ನೋಕಿಯಾ 5 ಮೊಬೈಲ್ ಬೆಲೆಯಲ್ಲೂ 1000 ರೂಪಾಯಿ ಇಳಿಕೆಯಾಗಿದೆ. 2017ರ ಸಪ್ಟೆಂಬರ್ ನಲ್ಲಿ ಬಿಡುಗಡೆಯಾಗಿದ್ದ ನೋಕಿಯಾ 8 ಮೊಬೈಲ್, ಡ್ಯೂಯೆಲ್ ಕ್ಯಾಮರಾ ಹಾಗೂ 5.3 ಇಂಚಿನ ಡಿಸ್ ಪ್ಲೇ ಹೊಂದಿದೆ.

ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಇದಕ್ಕಿದೆ. 4 ಜಿಬಿ RAM ಹಾಗೂ 64 ಜಿಬಿ ಸ್ಟೋರೇಜ್ ಅನ್ನು ಹೊಂದಿದೆ. 13 MP RGB + 13 MP ಮೋನೋಕ್ರೋಮ್ ಸೆನ್ಸಾರ್ ಅಳವಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...