alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ 7 ಪ್ಲಸ್ ವಿಶೇಷತೆ ಏನು ಗೊತ್ತಾ…?

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2018ರ ಪ್ರಾರಂಭದ ಜೊತೆಗೆ ಹೆಚ್ ಎಂ ಡಿ ಗ್ಲೋಬಲ್ ಕಾರ್ಯಕ್ರಮವೊಂದರಲ್ಲಿ ನೋಕಿಯಾದ 5 ಮೊಬೈಲ್ ಬಿಡುಗಡೆ ಮಾಡಿದೆ. ಇದ್ರಲ್ಲಿ ನೋಕಿಯಾ 7 ಪ್ಲಸ್ ಕೂಡ ಸೇರಿದೆ. ಇದಕ್ಕೆ ಆಂಡ್ರೋಯ್ಡ್ ಒನ್ ನೀಡಲಾಗಿದೆ. ಬೆಜಲ್ ಲೆಸ್ ವಿನ್ಯಾಸವನ್ನು ನೋಕಿಯಾ 7 ಪ್ಲಸ್ ಹೊಂದಿದ್ದು, Zeiss ಆಪ್ಲಿಕಲ್ ನೀಡಲಾಗಿದೆ.

ಹಿಂದಿನ ಫೋನ್ ನಂತೆ ಈ ಫೋನ್ ನಲ್ಲಿ ಕೂಡ ರಿಯರ್ ಕ್ಯಾಮರಾ ಹಾಗೂ ಸೆಲ್ಫಿ ಕ್ಯಾಮರಾ ಒಂದೇ ಬಾರಿ ಕೆಲಸ ಮಾಡಲಿದೆ. ಇದ್ರ ಡಿಸ್ಪ್ಲೇ 6 ಇಂಚಿನದ್ದಾಗಿದ್ದು, ಮುಂದಿನ ದಿನಗಳಲ್ಲಿ ಆಂಡ್ರಾಯ್ಡ್ ಪಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. 4ಜಬಿ ರ್ಯಾಮ್ ನ ನೋಕಿಯಾ 7 ಪ್ಲಸ್ ಸ್ಮಾರ್ಟ್ಫೋನ್ ಏಪ್ರಿಲ್ ನಲ್ಲಿ ಗ್ರಾಹಕರ ಕೈ ಸೇರಲಿದೆ.

ನೋಕಿಯಾ 7 ಪ್ಲಸ್ ನ ವಿಶೇಷತೆಗಳಲ್ಲಿ ಕ್ಯಾಮರ ಕೂಡ ಒಂದು. ಈ ಫೋನ್ ನಲ್ಲಿ ಎರಡು ರಿಯರ್ ಕ್ಯಾಮರಾ ನೀಡಲಾಗಿದೆ. 12 ಮೆಗಾಪಿಕ್ಸಲ್ ಹಾಗೂ 13 ಮೆಗಾಪಿಕ್ಸಲ್ ನ ಎರಡು ಕ್ಯಾಮರಾ ನೀಡಲಾಗಿದೆ. ಹಾಗೆ 16 ಮೆಗಾಪಿಕ್ಸಲ್ ನ ಫ್ರಂಟ್ ಕ್ಯಾಮರಾ ಇದ್ರಲ್ಲಿದೆ.

723 ಗಂಟೆ ಇದು ಬ್ಯಾಕ್ಅಪ್ ನೀಡಲಿದ್ದು, 64 ಜಿಬಿ ಇಂಟರ್ನಲ್ ಮೆಮೋರಿ ಹೊಂದಿದೆ. ಕಾರ್ಡ್ ಮೂಲಕ 256 ಜಿಬಿಗೆ ವಿಸ್ತರಿಸಿಕೊಳ್ಳಬಹುದಾಗಿದೆ. ಕಪ್ಪು, ಬಿಳಿ ಬಣ್ಣದಲ್ಲಿ ಗ್ರಾಹಕರಿಗೆ ಈ ಮೊಬೈಲ್ ಸಿಗಲಿದೆ. ಇದ್ರ ಬೆಲೆ ಎಷ್ಟು ಎಂಬುದು ಇನ್ನೂ ಹೊರ ಬಿದ್ದಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...