alex Certify
ಕನ್ನಡ ದುನಿಯಾ       Mobile App
       

Kannada Duniya

ಆ.23ರಿಂದ ಶುರುವಾಗಲಿದೆ ನೋಕಿಯಾ 6 ಸೇಲ್

nokia-6-6

ನೋಕಿಯಾ ಪ್ರಿಯರಿಗೊಂದು ಖುಷಿ ಸುದ್ದಿ. ನೋಕಿಯಾ ಕಂಪನಿಯ ಪ್ರಮುಖ ಸ್ಮಾರ್ಟ್ಫೋನ್ ನೋಕಿಯಾ 6 ಶೀಘ್ರದಲ್ಲಿ ಗ್ರಾಹಕರ ಕೈಗೆ ಬರಲಿದೆ. ಜುಲೈ 14ರಿಂದ ಈವರೆಗೆ ಸುಮಾರು 10 ಲಕ್ಷಕ್ಕೂ ಹೆಚ್ಚು ಮಂದಿ ನೋಂದಣಿ ಮಾಡಿದ್ದಾರೆ. ಇದು ಗ್ರಾಹಕರಿಗೆ ಕೇವಲ ಆನ್ಲೈನ್ ವೆಬ್ ಸೈಟ್ ಅಮೆಜಾನ್ ನಲ್ಲಿ ಲಭ್ಯವಾಗಲಿದೆ. ಅಮೆಜಾನ್ ನಲ್ಲಿ ಆಗಸ್ಟ್ 23ರಿಂದ ನೋಕಿಯಾ 6 ಮಾರಾಟ ಶುರುವಾಗಲಿದೆ.

ನೋಕಿಯಾ 6 ಸ್ಮಾರ್ಟ್ಫೋನ್ 14,999 ರೂಪಾಯಿಗೆ ಗ್ರಾಹಕರಿಗೆ ಸಿಗಲಿದೆ. ಅಮೆಜಾನ್ ಮೊಬೈಲ್ ಮೇಲೆ ಕೆಲವೊಂದು ರಿಯಾಯಿತಿ ನೀಡ್ತಿದೆ. ಈ ಆಫರ್ ಮೇಲೆ ಗ್ರಾಹಕರು 1 ಸಾವಿರ ರೂಪಾಯಿ ಕ್ಯಾಶ್ಬ್ಯಾಕ್ ಪಡೆಯಬಹುದಾಗಿದೆ. ಈ ಆಫರ್ ಅಮೆಜಾನ್ ನ ಪ್ರಧಾನ ಸದಸ್ಯರಿಗೆ ಸಿಗಲಿದೆ.

ವೋಡಾಫೋನ್ ಗ್ರಾಹಕರಿಗೆ 249 ರೂಪಾಯಿಗೆ ಪ್ರತಿ ತಿಂಗಳು 10 ಜಿಬಿ ಡೇಟಾ ಸಿಗಲಿದೆ. Makemytrip ನಲ್ಲಿ 2500 ರೂಪಾಯಿ ಆಫರ್ ಸಿಗಲಿದೆ. ನೋಕಿಯಾ 6 ಸ್ಮಾರ್ಟ್ಫೋನ್ ಆಂಡ್ರಾಯ್ಡ್ ನ  7.1.1 ಶೂನ್ಯದಲ್ಲಿ ಕೆಲಸ ಮಾಡಲಿದೆ. 5.5 ಇಂಚಿನ ಫುಲ್ ಹೆಚ್ ಡಿ ಡಿಸ್ಲ್ಪೇ ಹೊಂದಿದೆ. 3ಜಿಬಿ ರ್ಯಾಮ್ ಜೊತೆ 32ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...