alex Certify
ಕನ್ನಡ ದುನಿಯಾ       Mobile App
       

Kannada Duniya

ನಾಳೆ ಬಿಡುಗಡೆಯಾಗ್ತಿದೆ ನೋಕಿಯಾ ಸ್ಮಾರ್ಟ್ ಫೋನ್

nokia_5_022617102048-1ಬಹುನಿರೀಕ್ಷಿತ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳಾದ ನೋಕಿಯಾ 6, 5  ಮತ್ತು 3 ನಾಳೆ ಭಾರತದಲ್ಲಿ ಬಿಡುಗಡೆಯಾಗಲಿವೆ. ಈ ಮೊಬೈಲ್ ಗಳು ಕಳೆದ ಫೆಬ್ರವರಿಯಲ್ಲೇ ಬಾರ್ಸಿಲೋನಾದಲ್ಲಿ ಮಾರುಕಟ್ಟೆಗೆ ಬಂದಿದ್ವು.

ನೋಕಿಯಾ-3 ಫೋನ್ ನ ಬೆಲೆ ಅಂದಾಜು 9,000 ರೂ., ನೋಕಿಯಾ-5 ಬೆಲೆ ಸರಿಸುಮಾರು 12,000 ರೂ. ಹಾಗೂ ನೋಕಿಯಾ 6 ಫೋನ್ ಗೆ 15,000 ರೂಪಾಯಿ ನಿಗದಿಪಡಿಸಲಾಗಿದೆ.

ನೋಕಿಯಾ 6 ಮೊಬೈಲ್ 5.5 ಇಂಚಿನ ಡಿಸ್ ಪ್ಲೇ ಹೊಂದಿದೆ. 3 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಅದರಲ್ಲಿದೆ. 16 ಎಂಪಿ ರಿಯರ್ ಹಾಗೂ 8 ಎಂಪಿ ಫ್ರಂಟ್ ಕ್ಯಾಮರಾ ಹೊಂದಿದೆ. 5.3 ಇಂಚಿನ ಡಿಸ್ ಪ್ಲೇ ಹೊಂದಿರುವ ನೋಕಿಯಾ 5 ಮೊಬೈಲ್ ಗೆ ಕೊರ್ನಿಂಗ್ ಗೊರಿಲ್ಲಾ ಗ್ಲಾಸ್ ಅಳವಡಿಸಲಾಗಿದೆ.

ಇದರಲ್ಲಿ 2 ಜಿಬಿ ರ್ಯಾಮ್ ಹಾಗೂ 16 ಜಿಬಿ ಸ್ಟೋರೇಜ್ ಆಪ್ಷನ್ ಇದೆ. 13 ಎಂಪಿ ರಿಯರ್ ಹಾಗೂ 8 ಎಂಪಿ ಫ್ರಂಟ್ ಕ್ಯಾಮರಾವನ್ನು ಈ ಫೋನ್ ಹೊಂದಿದೆ. ಮ್ಯಾಟ್ ಬ್ಲಾಕ್, ಸಿಲ್ವರ್, ಟೆಂಪರ್ಡ್ ಬ್ಲೂ ಹಾಗೂ ಕಾಪರ್ ಬಣ್ಣಗಳಲ್ಲಿ ಈ ಸ್ಮಾರ್ಟ್ ಫೋನ್ ಲಭ್ಯವಿದೆ.

ನೋಕಿಯಾ 3 ಮೊಬೈಲ್ ಕೂಡ ಗೊರಿಲ್ಲಾ ಗ್ಲಾಸ್ ಹೊಂದಿದ್ದು, 5 ಇಂಚಿನ ಡಿಸ್ ಪ್ಲೇ ಅಳವಡಿಸಲಾಗಿದೆ. 2 ಜಿಬಿ ರ್ಯಾಮ್ ಹಾಗೂ 16 ಜಿಬಿ ಸ್ಟೋರೇಜ್ ಇದೆ. ಫ್ರಂಟ್ ಮತ್ತು ರಿಯರ್ ಕ್ಯಾಮರಾಗಳೆರಡೂ 8 ಮೆಗಾ ಫಿಕ್ಸಲ್ ಇವೆ. ಸ್ಯಾಮ್ ಸಂಗ್, ಲೆನೋವೋ, ಕ್ಸಿಯೋಮಿ, ಮೋಟೋ ಪೈಪೋಟಿ ನಡುವೆ ನೋಕಿಯಾ ಸ್ಮಾರ್ಟ್ ಫೋನ್ ಗಳಿಗೆ ಯಾವ ರೀತಿ ರೆಸ್ಪಾನ್ಸ್ ಸಿಗುತ್ತೆ ಅನ್ನೋದನ್ನು ಕಾದು ನೋಡ್ಬೇಕು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...