alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ ಪ್ರಿಯರಿಗೆ ಇಲ್ಲಿದೆ ಶುಭ ಸುದ್ದಿ

ಹೆಚ್ ಎಂ ಡಿ ಗ್ಲೋಬಲ್ ನವದೆಹಲಿಯಲ್ಲಿ ಮೂರು ಹೊಸ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ನೋಕಿಯಾ 7ಪ್ಲಸ್, ನೋಕಿಯಾ 6(2018) ಮತ್ತು ನೋಕಿಯಾ 8 Sirocco ಬಿಡುಗಡೆ ಮಾಡಿದೆ. ಮೂರು ಸ್ಮಾರ್ಟ್ಫೋನ್ ಸಾಕಷ್ಟು ವೈಶಿಷ್ಟ್ಯತೆಗಳಿಂದ ಕೂಡಿದೆ ಎಂದು ಹೆಚ್ ಎಂ ಡಿ ಹೇಳಿದೆ.

ನೋಕಿಯಾ 7 ಪ್ಲಸ್ ಬೆಲೆ 25,999 ರೂಪಾಯಿ. ನೋಕಿಯಾ 6(2018) ಸ್ಮಾರ್ಟ್ ಫೋನ್ ಗ್ರಾಹಕರಿಗೆ 16,999 ರೂಪಾಯಿಗೆ ಸಿಗಲಿದೆ. ನೋಕಿಯಾ 8 Sirocco ಬೆಲೆ 49,999 ರೂಪಾಯಿ ನಿಗದಿಪಡಿಸಲಾಗಿದೆ. ಈ ಸ್ಮಾರ್ಟ್ಫೋನ್ ಜೊತೆ ಕ್ಯಾಶ್ಬ್ಯಾಕ್ ಆಫರ್ ನೀಡೋದಾಗಿ ಕಂಪನಿ ಹೇಳಿದೆ.

ಅಮೆಜಾನ್ ಇಂಡಿಯಾ, ಫ್ಲಿಪ್ಕಾರ್ಟ್, ನೋಕಿಯಾ ಮೊಬೈಲ್ ಶಾಪ್ ನಲ್ಲಿ ಈ ಸ್ಮಾರ್ಟ್ಫೋನ್ ಗಳು ಲಭ್ಯವಿದೆ. ನೋಕಿಯಾ 7 ಪ್ಲಸ್ ಸ್ಮಾರ್ಟ್ಫೋನ್ ಮುಂಗಡ ಬುಕ್ಕಿಂಗ್ ಏಪ್ರಿಲ್ 20ರಿಂದ ಶುರುವಾಗಲಿದ್ದು, ಏಪ್ರಿಲ್ 30 ರಿಂದ ಮಾರಾಟ ಶುರುವಾಗಲಿದೆ. ನೋಕಿಯಾ 6(2018) ಮಾರಾಟ ಏಪ್ರಿಲ್ 6ರಿಂದ ಶುರುವಾಗಲಿದೆ. ನೋಕಿಯಾ 8 Sirocco ಬುಕ್ಕಿಂಗ್ ಏಪ್ರಿಲ್ 30ರಿಂದ ಶುರುವಾಗಲಿದೆ ಎಂದು ಕಂಪನಿ ಹೇಳಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...