alex Certify
ಕನ್ನಡ ದುನಿಯಾ       Mobile App
       

Kannada Duniya

ನೋಕಿಯಾ ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ

ಆಗಸ್ಟ್ 21 ರಂದು ನೋಕಿಯಾ ತನ್ನ 6.1 ಪ್ಲಸ್ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲಿದೆ. ಈ ಮೊಬೈಲ್ ಬಿಡುಗಡೆಗೂ ಮುನ್ನವೆ ನೋಕಿಯಾ ತನ್ನ ಹಳೆ ಮೊಬೈಲ್ ನೋಕಿಯಾ 6 ಸ್ಮಾರ್ಟ್ಫೋನ್ ಬೆಲೆಯಲ್ಲಿ ಇಳಿಕೆ ಮಾಡಿದೆ. ನೋಕಿಯಾ 6.1 (ನೋಕಿಯಾ 6) ಫೋನ್ ಭಾರತದಲ್ಲಿ ಇದೇ ವರ್ಷ ಮಾರ್ಚ್ ನಲ್ಲಿ ಬಿಡುಗಡೆಯಾಗಿತ್ತು.

ಫೆಬ್ರವರಿಯಲ್ಲಿ ನಡೆದ MWC 2018 ಕಾರ್ಯಕ್ರಮದಲ್ಲಿ ನೋಕಿಯಾ 6 ಮೊಬೈಲ್ ಬಿಡುಗಡೆಯಾಗಿತ್ತು. ಈ ಫೋನ್ ಬೆಲೆ ಈಗ 1500 ರವರೆಗೆ ಇಳಿಕೆ ಕಂಡಿದೆ. ನೋಕಿಯಾ 6 ಮೊಬೈಲನ್ನು 3ಜಿಬಿ ರ್ಯಾಮ್ ಹಾಗೂ 32ಜಿಬಿ ಸ್ಟೋರೇಜ್ ನೊಂದಿಗೆ ಬಿಡುಗಡೆ ಮಾಡಲಾಗಿತ್ತು. ಈ ಫೋನ್ ಬೆಲೆ ಭಾರತದಲ್ಲಿ 16,999 ರೂಪಾಯಿಯಾಗಿತ್ತು. ಇದಾದ ನಂತ್ರ ಕಂಪನಿ 4ಜಿಬಿ ರ್ಯಾಮ್ ಹಾಗೂ 64ಜಿಬಿ ಸ್ಟೋರೇಜ್ ರೂಪಾಂತರವನ್ನು ಪರಿಚಯಿಸ್ತು. ಇದ್ರ ಬೆಲೆ 18,999 ರೂಪಾಯಿ.

ಬೆಲೆ ಇಳಿಕೆ ನಂತ್ರ 3ಜಿಬಿ ರ್ಯಾಮ್ ಮೊಬೈಲ್ ಗ್ರಾಹಕರಿಗೆ 15,499 ರೂಪಾಯಿಗೆ ಸಿಗಲಿದೆ. 4ಜಿಬಿ ರ್ಯಾಮ್ ಮೊಬೈಲ್ 17,499 ರೂಪಾಯಿಗೆ ಲಭ್ಯವಾಗಲಿದೆ. ಎರಡೂ ಮೊಬೈಲ್ ಬೆಲೆ ಹಾಗೂ ವಿಶೇಷತೆಗಳು ಕಂಪನಿಯ ವೆಬ್ಸೈಟ್ ನಲ್ಲಿ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...