alex Certify
ಕನ್ನಡ ದುನಿಯಾ       Mobile App
       

Kannada Duniya

ಬಿಡುಗಡೆಯಾಯ್ತು ನೋಕಿಯಾ 3310 3ಜಿ ಫೋನ್

ಹೆಚ್ ಎಂ ಡಿ ಗ್ಲೋಬಲ್ ನೋಕಿಯಾ 3310 ಹೊಸ ರೂಪಾಂತರವನ್ನು ಬಿಡುಗಡೆ ಮಾಡಿದೆ. ಇದಕ್ಕೆ ನೋಕಿಯಾ 3310 3ಜಿ ಎಂದು ಹೆಸರಿಡಲಾಗಿದೆ. ಮೊಬೈಲ್ ವರ್ಲ್ಡ್ ಕಾಂಗ್ರೆಸ್ ನೋಕಿಯಾ 3310 ಫೋನನ್ನು ಅತ್ಯಂತ ಜನಪ್ರಿಯ ಫೋನ್ ಎಂದು ಪರಿಗಣಿಸಿದೆ.

ನೋಕಿಯಾ 3310 3ಜಿ  ಮೊಬೈಲ್ ಆಸ್ಟ್ರೇಲಿಯಾ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಇದ್ರ ಮಾರಾಟ ಅಕ್ಟೋಬರ್ 16ರಿಂದ ಶುರುವಾಗಲಿದೆ. ಆಸ್ಟ್ರೇಲಿಯಾದಲ್ಲಿ ಇದ್ರ ಬೆಲೆ 89.95 ಆಸ್ಟ್ರೇಲಿಯನ್ ಡಾಲರ್. ಅಂದ್ರೆ ಸುಮಾರು 5320 ರೂಪಾಯಿಗೆ ಗ್ರಾಹಕರ ಕೈಗೆ ಸಿಗಲಿದೆ.

3310 3ಜಿನಲ್ಲಿ ಗ್ರಾಹಕರು ವೇಗವಾಗಿ ನೆಟ್ ಬಳಸಬಹುದಾಗಿದೆ. ಜೊತೆಗೆ ನೋಕಿಯಾ 3310 ಮೊಬೈಲ್ ಗಿಂತ ಹೆಚ್ಚು ವೈಶಿಷ್ಟ್ಯಗಳನ್ನು ಇದು ಹೊಂದಿದೆ. ನೋಕಿಯಾ 3310 3ಜಿ ನಾಲ್ಕು ಬಣ್ಣದಲ್ಲಿ ಲಭ್ಯವಿದೆ.

ವಿಶ್ವದ ಬೇರೆ ಬೇರೆ ಮಾರುಕಟ್ಟೆಯಲ್ಲಿ ನೋಕಿಯಾ 3310 ಹ್ಯಾಂಡ್ ಸೆಟ್ 10 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ನೋಕಿಯಾ 3310 ಮೊಬೈಲ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆಪ್ಲೈನ್ ಮಾರುಕಟ್ಟೆಯಲ್ಲಿ ಮಾತ್ರ ಮೊಬೈಲ್ ಸಿಗ್ತಿದೆ. ಆದ್ರೆ ಸ್ಟಾಕ್ ಖಾಲಿಯಾಗಿದ್ದು ಗ್ರಾಹಕರ ನಿರಾಶೆಗೆ ಕಾರಣವಾಗಿದೆ. ನೋಕಿಯಾ 3310 3ಜಿ ಭಾರತದಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಎಂಬುದನ್ನು ಕಂಪನಿ ಇನ್ನೂ ಸ್ಪಷ್ಟಪಡಿಸಿಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...