alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತ್ಯೇಕ ರೈಲ್ವೆ ಬಜೆಟ್ ಇನ್ನಿಲ್ಲ

suresh-prabhu-

92 ವರ್ಷಗಳ ನಂತ್ರ ಆರ್ಥಿಕ ವರ್ಷ 2017ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡಿಸದಿರಲು ಸರ್ಕಾರ ನಿರ್ಧರಿಸಿದೆ. ರೈಲ್ವೆ ಬಜೆಟ್ ನ್ನು ಸಾಮಾನ್ಯ ಬಜೆಟ್ ಜೊತೆ ವಿಲೀನಗೊಳಿಸುವ ಪ್ರಸ್ತಾವನೆಗೆ ಹಣಕಾಸು ಸಚಿವಾಲಯ ಹಸಿರು ನಿಶಾನೆ ತೋರಿದೆ.

ಭಾರತದ ಆಡಳಿತ ನಡೆಸುತ್ತಿದ್ದ ಬ್ರಿಟೀಷರು 1924 ರಿಂದ ಪ್ರತ್ಯೇಕ ರೈಲ್ವೆ ಬಜೆಟ್ ಮಂಡನೆಯನ್ನು ಜಾರಿಗೆ ತಂದಿದ್ದರು. ಕೇಂದ್ರದಲ್ಲಿ ರೈಲ್ವೆಗಿಂತಲೂ ಹೆಚ್ಚು ವ್ಯವಹಾರ ನಡೆಸುವ ಸಚಿವಾಲಯಗಳಿವೆ. ಹಾಗಿರುವಾಗ ರೈಲ್ವೆಗೆ ಏಕೆ ಪ್ರತ್ಯೇಕ ಬಜೆಟ್ ಎಂಬ ಪ್ರಶ್ನೆ ಹುಟ್ಟಿತ್ತು. ಸರ್ಕಾರ ಈ ಸಂಬಂಧ ಗಂಭೀರ ಚಿಂತನೆ ನಡೆಸಿತ್ತು. ಈಗ ಪ್ರತ್ಯೇಕ ಬಜೆಟ್ ಗೆ ಮುಕ್ತಾಯ ಹಾಡಲು ಹಣಕಾಸು ಸಚಿವಾಲಯ ಮುಂದಾಗಿದೆ.

ವರದಿಯೊಂದರ ಪ್ರಕಾರ ಹಣಕಾಸು ಸಚಿವಾಲಯ ಐದು ಸದಸ್ಯರ ಒಂದು ಸಮಿತಿಯನ್ನು ಸಿದ್ಧಪಡಿಸಿದೆ. ಈ ತಂಡ ಎರಡೂ ಬಜೆಟ್ ವಿಲೀನಕ್ಕೆ ಸಂಬಂಧಿಸಿದಂತೆ ಕೆಲಸ ಮಾಡಲಿದೆ. ಈ ವಿಲೀನದ ನಂತ್ರ ಪ್ರತಿ ವರ್ಷದಂತೆ ನಡೆಯುವ ರೈಲ್ವೆ ಮಂತ್ರಿಯ ಭಾಷಣ ಬಂದ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...