alex Certify
ಕನ್ನಡ ದುನಿಯಾ       Mobile App
       

Kannada Duniya

ನಿಷೇಧಿತ ನೋಟು ಹೊಂದಿರೋ NRI ಗಳಿಗೊಂದು ಸುದ್ದಿ

ಕೇಂದ್ರ ಸರ್ಕಾರ ನಿಷೇಧ ಮಾಡಿರುವ ಹಳೆ ನೋಟುಗಳನ್ನು ಡೆಪಾಸಿಟ್ ಮಾಡಲು ಎನ್ ಆರ್ ಐ ಗಳಿಗೆ ಮತ್ತೊಂದು ಅವಕಾಶ ಕೊಡುವ ಪ್ರಶ್ನೆಯೇ ಇಲ್ಲ ಅಂತಾ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ.

ವಿದೇಶದಲ್ಲಿರುವ ಭಾರತೀಯರಿಗೆ ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಠೇವಣಿ ಇಡಲು ಸರ್ಕಾರ ಸಮಯ ನೀಡಿತ್ತು. ಮತ್ತೆ ಚಾನ್ಸ್ ಕೊಡಲು ಸಾಧ್ಯವಿಲ್ಲ ಅಂತಾ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಕಳೆದ ನವೆಂಬರ್ 8 ರಂದೇ ಕೇಂದ್ರ ಸರ್ಕಾರ ನೋಟು ನಿಷೇಧ ಮಾಡಿತ್ತು. ಆದ್ರೆ ಈಗಲೂ ಕೆಲವು ಎನ್ ಆರ್ ಐ ಗಳ ಬಳಿ ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳಿವೆಯಂತೆ. ಈ  ರೀತಿ ಸುಮಾರು 7500 ಕೋಟಿ ಮೊತ್ತದ ಹಳೆ ನೋಟುಗಳಿದ್ದು, ಅವುಗಳನ್ನು ಈಗ ಡೆಪಾಸಿಟ್ ಮಾಡಿಕೊಳ್ಳಲು ಆರ್ ಬಿ ಐ ಒಪ್ಪಿಲ್ಲ.

ಅಷ್ಟೇ ಅಲ್ಲ ಎನ್ ಆರ್ ಐ ಗಳ ಬಳಿ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲು ಆಧಾರ್ ಕಾರ್ಡ್ ಕೂಡ ಇಲ್ಲ. ಈ ಎಲ್ಲಾ ಸಮಸ್ಯೆಗಳನ್ನು ನ್ಯೂಯಾರ್ಕ್ ನಲ್ಲಿ ಸುಷ್ಮಾ ಸ್ವರಾಜ್ ಬಳಿ ಎನ್ ಆರ್ ಐ ಗಳ ನಿಯೋಗ ತೋಡಿಕೊಂಡಿದೆ. ಆದ್ರೆ ಎನ್ ಆರ್ ಐ ಗಳಿಗೆ ಬ್ಯಾಂಕ್ ವಹಿವಾಟು ನಡೆಸಲು ಆಧಾರ್ ಕಾರ್ಡ್ ಅಗತ್ಯವಿಲ್ಲ ಅಂತಾ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...