alex Certify
ಕನ್ನಡ ದುನಿಯಾ       Mobile App
       

Kannada Duniya

ಕೆಲ ದಿನಗಳಲ್ಲೇ ಬಂದ್ ಆಗಲಿದೆ ಯಾಹೂ ಮೆಸೆಂಜರ್

ಇನ್ನು ಮುಂದಿನ ದಿನಗಳಲ್ಲಿ ಯಾಹೂ ಮೆಸೆಂಜರ್ ಕೇವಲ ನೆನಪು ಮಾತ್ರ. ಹೌದು…! ಕಳೆದ 20 ವರ್ಷಗಳ ಹಿಂದೆ ಅಂತರ್ಜಾಲದಲ್ಲಿ ಮೂಡಿಬಂದ ಯಾಹೂ ಮೆಸೆಂಜರ್ ಗೆ ಇದೇ ಜುಲೈ 17 ರಂದು ತೆರೆ ಬೀಳಲಿದೆ.

ಯಾಹೂ ಮೆಸೆಂಜರ್ ಕೊನೆಯಾಗಲಿದೆ ಎನ್ನುವ ವಿಷಯವನ್ನು ಸ್ವತಃ ಯಾಹೂ ಸಂಸ್ಥೆಯವರೇ ತಿಳಿಸಿದ್ದಾರೆ. ಪ್ರಸ್ತುತವಾಗಿ ಸಾಮಾಜಿಕ ಜಾಲತಾಣದಲ್ಲಿ ಫೇಸ್ ಬುಕ್, ವಾಟ್ಸಾಪ್ ಗಳು ಮುಂಚೂಣಿಯಲ್ಲಿವೆ. ಇಲ್ಲಿ ಸ್ಪರ್ಧೆಯೂ ಹೆಚ್ಚಾಗಿರುವುದರಿಂದ ಯಾಹೂ ಸಂಸ್ಥೆಯವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

1998 ರ ಮಾರ್ಚ್ ತಿಂಗಳಿನಲ್ಲಿ ಯಾಹೂ ಮೊಟ್ಟ ಮೊದಲಿಗೆ ಅಂತರ್ಜಾಲದಲ್ಲಿ ತನ್ನ ಹೆಜ್ಜೆಯನ್ನಿಟ್ಟಿತು. ಆರಂಭದ ದಿನಗಳಲ್ಲಿ ಅತಿ ಬೇಗನೆ ಸಂದೇಶಗಳು ರವಾನೆಯಾಗುತ್ತಿದ್ದ ಮಾಧ್ಯಮವೇ ಯಾಹೂ ಮೆಸೆಂಜರ್. ಪ್ರತಿಯೊಂದು ಇ-ಮೇಲ್ ಗಳು ಅತಿ ವೇಗವಾಗಿ ಬೇರೆಯವರಿಗೆ ರವಾನೆಯಾಗುತ್ತಿತ್ತು. ಆದರೆ ಇದೀಗ ಜುಲೈ 17 ರ ನಂತರ ಯಾಹೂ ಮೆಸೆಂಜರ್ ಕೇವಲ ನೆನಪು ಮಾತ್ರ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...