alex Certify
ಕನ್ನಡ ದುನಿಯಾ       Mobile App
       

Kannada Duniya

ಜಿಯೋ ಫೋನ್ ಗ್ರಾಹಕರಿಗೊಂದು ಖುಷಿ ಸುದ್ದಿ

ರಿಲಾಯನ್ಸ್ ಜಿಯೋ 41ನೇ ವಾರ್ಷಿಕ ಸಭೆಯಲ್ಲಿ ಜಿಯೋಫೋನ್-2 ಬಗ್ಗೆ ಮಾಹಿತಿ ನೀಡಿದೆ. ಜಿಯೋಫೋನ್-2 ಖರೀದಿ ಮಾಡುವವರಲ್ಲಿ ಅನೇಕ ಪ್ರಶ್ನೆಗಳು ಮನೆ ಮಾಡಿವೆ. ಹಳೆ ಜಿಯೋ ಫೋನ್ ಬದಲಿಸಿ ಹೊಸ ಫೋನ್ ಖರೀದಿ ಮಾಡಬಹುದಾ ಅಥವಾ ಜಿಯೋ ಫೋನ್-2 ಗೆ 501 ರೂಪಾಯಿ ಪ್ರತ್ಯೇಕವಾಗಿ ನೀಡಬೇಕಾ ಎಂಬ ಪ್ರಶ್ನೆ ಕಾಡ್ತಿದೆ.

ಈ ಎಲ್ಲ ಪ್ರಶ್ನೆಗಳಿಗೆ ಈಗ ಉತ್ತರ ಸಿಕ್ಕಿದೆ. ಗ್ರಾಹಕರು ಜಿಯೋಫೋನ್ ಮಾತ್ರವಲ್ಲ ಬೇರೆ ಯಾವುದೇ ಕಂಪನಿಯ ಫೀಚರ್ ಫೋನ್ ವಿನಿಮಯ ಮಾಡಿ ಜಿಯೋಫೋನ್-2 ಖರೀದಿ ಮಾಡಬಹುದಾಗಿದೆ. ಜಿಯೋ ಫೋನ್ ಗ್ರಾಹಕರಿಗೆ ಕಂಪನಿ ಖುಷಿ ಸುದ್ದಿಯನ್ನು ನೀಡಿದೆ. ಹಳೆ ಫೋನ್ ನಿಷ್ಪ್ರಯೋಜಕವಲ್ಲ. ಹಳೆ ಫೋನ್ ನಲ್ಲಿ ಕೂಡ ಜಿಯೋ ಫೋನ್-2 ಫೀಚರ್ ಸಿಗಲಿದೆ,

ಜಿಯೋ ಫೋನ್-2 ನಲ್ಲಿ ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಅನೇಕ ಸೌಲಭ್ಯ ಸಿಗ್ತಿದೆ. ಜಿಯೋ ಫೋನ್ ಗ್ರಾಹಕರು ನಮಗೆ ಸಿಗ್ತಿಲ್ಲವಲ್ಲ ಅಂತಾ ಬೇಸರ ಮಾಡಿಕೊಳ್ಳುವ ಅಗತ್ಯವಿಲ್ಲ. ಆಗಸ್ಟ್ 15ರ ನಂತ್ರ ನಿಮ್ಮ ಫೋನ್ ಅಪ್ಡೇಟ್ ಮಾಡಿ ವಾಟ್ಸಾಪ್, ಫೇಸ್ಬುಕ್ ಸೇರಿದಂತೆ ಜಿಯೋ ಫೋನ್-2ನಲ್ಲಿರುವ ಎಲ್ಲ ಫೀಚರ್ ಲಾಭವನ್ನು ನೀವೂ ಪಡೆಯಬಹುದು.

ಜುಲೈ 20ರ ಸಂಜೆ 5 ಗಂಟೆಯಿಂದ ಗ್ರಾಹಕರು ಜಿಯೋ ಫೋನ್-2ಗಾಗಿ ಹೆಸರು ನೋಂದಣಿ ಮಾಡಬಹುದಾಗಿದೆ. ಬೇರೆ ಕಂಪನಿಯ ಫೀಚರ್ ಫೋನ್ ವಿನಿಮಯ ಮಾಡಿ ಹೊಸ ಜಿಯೋ ಫೋನ್-2 ಖರೀದಿ ಮಾಡಬಯಸುವವರು 501 ರೂಪಾಯಿ ವಿನಿಮಯದೊಂದಿಗೆ ಹೊಸ ಫೋನ್ ಪಡೆಯಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...