alex Certify
ಕನ್ನಡ ದುನಿಯಾ       Mobile App
       

Kannada Duniya

ಹಳೆ ನೋಟು ಎಣಿಕೆಗೆ ಯಂತ್ರ ಬಳಸಿಲ್ಲ RBI

ನಿಷೇಧಿತ 500 ಮತ್ತು 1000 ರೂಪಾಯಿ ನೋಟುಗಳನ್ನು ಎಣಿಸಲು ಯಂತ್ರಗಳನ್ನು ಬಳಕೆ ಮಾಡಿಲ್ಲ ಅಂತಾ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ. ನಿಷೇಧಿತ ನೋಟುಗಳ ಎಣಿಕೆಗೆ ಎಷ್ಟು ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು ಅನ್ನೋ ವಿವರ ನೀಡಲು ನಿರಾಕರಿಸಿದೆ.

ಆಗಸ್ಟ್ 30ರಂದು ವಾರ್ಷಿಕ ವರದಿ ಬಿಡುಗಡೆ ಮಾಡಿದ್ದ ಆರ್ ಬಿ ಐ, 16,050 ಕೋಟಿ ಮೌಲ್ಯದ ಹಳೆ ನೋಟುಗಳು ಮಾತ್ರ ವಾಪಸ್ ಬಂದಿಲ್ಲ ಅಂತಾ ಹೇಳಿತ್ತು. ನವೆಂಬರ್ 8ರಂದು ಒಟ್ಟು 15.44 ಲಕ್ಷ ಕೋಟಿ ಮೊತ್ತದ 500 ಮತ್ತು 1000 ರೂಪಾಯಿ ನೋಟುಗಳನ್ನು ಮಾತ್ರ ನಿಷೇಧಿಸಲಾಗಿತ್ತು.

ಗ್ರಾಹಕರು ಮರಳಿಸಿದ ಹಳೆ ನೋಟುಗಳನ್ನು ಲೆಕ್ಕಹಾಕಲು ಆರ್ ಬಿಐನ ಯಾವುದೇ ಕಚೇರಿಗಳಲ್ಲಿ ಯಂತ್ರಗಳನ್ನು ಬಳಸಿಲ್ಲ. ಅಷ್ಟೇ ಅಲ್ಲ ನೋಟು ಎಣಿಕೆ ಯಂತ್ರಗಳನ್ನು ಬಾಡಿಗೆಗೂ ಪಡೆದಿರಲಿಲ್ಲ ಅಂತಾ ಆರ್ ಬಿಐ ಸ್ಪಷ್ಟಪಡಿಸಿದೆ. ಆರ್ ಟಿ ಐ ಅಡಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರಿಸಿದ ಆರ್ ಬಿ ಐ ಈ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...