alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್-ಡೀಸೆಲ್ ಜಿ.ಎಸ್.ಟಿ. ವ್ಯಾಪ್ತಿಗೆ ತರಲು ನಡೆದಿದೆ ಹಗ್ಗಜಗ್ಗಾಟ

ಪೆಟ್ರೋಲ್, ಡೀಸೆಲ್ ಸೇರಿದಂತೆ ತೈಲೋತ್ಪನ್ನಗಳ ಮೇಲೆ ಸರ್ಕಾರ ಜಿಎಸ್ಟಿ ಜಾರಿಗೊಳಿಸೋಕೆ ಇನ್ನೂ ಹಿಂದೆ ಮುಂದೆ ನೋಡ್ತಿದೆ. ತೈಲೋತ್ಪನ್ನಗಳಾದ ಪೆಟ್ರೋಲ್, ಡೀಸೆಲ್, ಕಚ್ಚಾತೈಲ, ನೈಸರ್ಗಿಕ ಇಂಧನ ಮತ್ತು ವಿಮಾನಕ್ಕೆ ಬಳಸುವ ಪೆಟ್ರೋಲ್ ಉತ್ಪನ್ನಗಳನ್ನ ಒನ್ ನೇಷನ್ ಒನ್ ಟ್ಯಾಕ್ಸ್ ವ್ಯಾಪ್ತಿಗೆ ಒಳಪಡಿಸಿಲ್ಲ. ಜುಲೈ 2017ರಿಂದಲೂ ಪೆಟ್ರೋಲ್ ಸೇರಿದಂತೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ತರೋದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಿಂದುಮುಂದು ನೋಡ್ತಿವೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯಕ್ಕೆ ಕೇಳಿಬರ್ತಿರೋ ಮಾತುಗಳು ಏನಂದ್ರೆ ಪೆಟ್ರೋಲ್ ಡೀಸೆಲ್ ಸೇರಿದಂತೆ ಇತರೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸೋದ್ರಿಂದ ರಾಜ್ಯ ಮತ್ತು ಕೇಂದ್ರಗಳ ಆದಾಯ ಕುಂಠಿತವಾಗಲಿದೆಯಂತೆ. ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸದ್ಯಕ್ಕೆ ಪೆಟ್ರೋಲ್-ಡೀಸೆಲ್, ಇತರೆ ತೈಲೋತ್ಪನ್ನಗಳನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸುವ ಯಾವುದೇ ಯೋಚನೆಗಳು ಸದ್ಯಕ್ಕಿಲ್ಲ ಅಂತ ಹೇಳಲಾಗ್ತಿದೆ.

ಈ ಬಗ್ಗೆ ಆಗಸ್ಟ್ 4ರಂದು ನಡೆದ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ರಾಜ್ಯ ಸರ್ಕಾರಗಳು ಕೂಡ ವಿರೋಧ ವ್ಯಕ್ತಪಡಿಸಿವೆಯಂತೆ. ಒಂದು ವೇಳೆ ಪೆಟ್ರೋಲ್ ಮತ್ತು ಡೀಸೆಲ್ ನ್ನ ಜಿಎಸ್ಟಿ ವ್ಯಾಪ್ತಿಗೆ ಒಳಪಡಿಸಿದ ಪಕ್ಷದಲ್ಲಿ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ಸುಮಾರು 20,000 ಕೋಟಿ ನಷ್ಟ ಸಂಭವಿಸಲಿದೆಯಂತೆ. ಇನ್ನು ರಾಜ್ಯ ಸರ್ಕಾರಗಳಿಗೂ ಕೂಡ ತೈಲೋತ್ಪನ್ನಗಳ ಮೇಲೆ ಜಿಎಸ್ಟಿ ಜಾರಿಯಾದ್ರೆ ಹೆಚ್ಚಿನ ನಷ್ಟ ಸಂಭವಿಸಲಿದೆಯಂತೆ.

ಸದ್ಯಕ್ಕೆ ದೆಹಲಿಯಲ್ಲಿ ಪೆಟ್ರೋಲ್ ದರದ ಮೇಲೆ 19.48 ರೂಪಾಯಿಯ ತೆರಿಗೆಯನ್ನ ಸರ್ಕಾರ ವಿಧಿಸಿದೆ. ಡೀಸೆಲ್ ದರದ ಮೇಲೆ 15.33 ರೂಪಾಯಿ ತೆರಿಗೆಯನ್ನ ವಿಧಿಸಿದೆ. ತೈಲ ಕಂಪನಿಗಳಿಂದ ಖರೀದಿಸುವ ಬೆಲೆಗಿಂತ ಶೇಕಡಾ 27 ರಷ್ಟು ಹೆಚ್ಚಿನ ಬೆಲೆಗೆ ತೈಲ ಮಾರಾಟವಾಗ್ತಿದೆ.

ಮುಂಬೈನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಶೇಕಡಾ 39ರಷ್ಟು ವ್ಯಾಟ್ ಇದ್ದರೆ, ತೆಲಂಗಾಣದಲ್ಲಿ ಡೀಸೆಲ್ ಮೇಲೆ ಶೇಕಡಾ 26ರಷ್ಟು ವ್ಯಾಟ್ ವಿಧಿಸಲಾಗಿದೆ. ಒಟ್ಟಾರೆ ಪೆಟ್ರೋಲ್ ಮೇಲೆ ಶೇಕಡಾ 45-50 ಮತ್ತು ಡೀಸೆಲ್ ಮೇಲೆ 35-40 ತೆರಿಗೆ ರೂಪದಲ್ಲಿ ಹೆಚ್ಚಿನ ಆದಾಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಖಜಾನೆ ತುಂಬಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...