alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನ ನಿಲ್ದಾಣದ ಡ್ಯೂಟಿ ಫ್ರೀ ಮಳಿಗೆಯಲ್ಲಿ ಜಾರಿಯಾಗಲ್ಲ ಜಿಎಸ್ಟಿ

ವಿಮಾನ ನಿಲ್ದಾಣದಲ್ಲಿ ಸಾಮಾನು ಖರೀದಿ ಮಾಡುವವರಿಗೊಂದು ಖುಷಿ ಸುದ್ದಿ. ಡ್ಯೂಟಿ ಫ್ರೀ ಶಾಪಿಂಗ್ ಮಾಡುವ ಗ್ರಾಹಕರ ಜೇಬಿಗೆ ಯಾವುದೇ ಬಿಸಿ ತಟ್ಟುವುದಿಲ್ಲ. ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೂಡ ಡ್ಯೂಟಿ ಫ್ರೀ ಸ್ಟೋರ್ಸ್ ನಲ್ಲಿ ಜಿ ಎಸ್ ಟಿ ನೀಡಬೇಕಾಗಿಲ್ಲ.

ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಕೋಲ್ಕತ್ತಾ ಸೇರಿದಂತೆ 16 ಬೇರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಡ್ಯೂಟಿ ಫ್ರೀ ಮಳಿಗೆಗಳಲ್ಲಿ ಜಿ ಎಸ್ ಟಿ ನೀಡಬೇಕಾಗಿಲ್ಲ. ಮೊದಲು ಕೇಂದ್ರ ಮಾರಾಟ ತೆರಿಗೆ ಹಾಗೂ ವ್ಯಾಟ್ ನಿಂದ ಗ್ರಾಹಕರಿಗೆ ರಿಯಾಯಿತಿ ಸಿಗ್ತಿತ್ತು. ಜಿ ಎಸ್ ಟಿ ಜಾರಿಗೆ ಬಂದ ಮೇಲೆ ವಸ್ತುಗಳ ಬೆಲೆ ದುಬಾರಿಯಾಯ್ತು. ಇದ್ರಿಂದಾಗಿ ವಿಮಾನ ನಿಲ್ದಾಣದಲ್ಲಿರುವ ಡ್ಯೂಟಿ ಫ್ರೀ ಮಳಿಗೆಗಳ ವ್ಯಾಪಾರದಲ್ಲಿ ಇಳಿಕೆ ಕಂಡು ಬಂದಿತ್ತು.

ವಿಮಾನ ನಿಲ್ದಾಣದಲ್ಲಿರುವ ಸುಂಕ ರಹಿತ ಮಳಿಗೆಗಳಲ್ಲಿ ಮದ್ಯ, ಮಿಠಾಯಿ, ಸುಗಂಧಗಳನ್ನು ಹೆಚ್ಚಾಗಿ ಖರೀದಿ ಮಾಡಲಾಗುತ್ತದೆ. ಅಂತರಾಷ್ಟ್ರೀಯ ಬ್ರ್ಯಾಂಡ್ ನ ವಸ್ತುಗಳು ಬೇರೆ ಮಾರುಕಟ್ಟೆಗೆ ಹೋಲಿಸಿದ್ರೆ ಇಲ್ಲಿ ಶೇಕಡಾ 30-40ರಷ್ಟು ಕಡಿಮೆ ಬೆಲೆಗೆ ಸಿಗುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...