alex Certify
ಕನ್ನಡ ದುನಿಯಾ       Mobile App
       

Kannada Duniya

ಬುಧವಾರವೂ ವಾಹನ ಸವಾರರಿಗೆ ‘ನೆಮ್ಮದಿ’ ಸುದ್ದಿ

ವಾಹನ ಸವಾರರಿಗೆ ಪೆಟ್ರೋಲ್-ಡಿಸೇಲ್ ದರ ನೆಮ್ಮದಿ ನೀಡ್ತಿದೆ. ಬುಧವಾರ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ಮಂಗಳವಾರದ ದರವೇ ಮುಂದುವರೆದಿದೆ.

ಕಳೆದ ಆರು ದಿನಗಳಿಂದ ನಿರಂತರ ಇಳಿಕೆ ಕಂಡಿದ್ದ ಪೆಟ್ರೋಲ್-ಡಿಸೇಲ್ ಬೆಲೆಯಲ್ಲಿ ಇಂದು ಯಾವುದೇ ಬದಲಾವಣೆ ಕಂಡು ಬಂದಿಲ್ಲ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 76.38 ರೂಪಾಯಿಯಿದೆ. ಡಿಸೇಲ್ ಬೆಲೆಯಲ್ಲಿಯೂ ಯಾವುದೇ ಬದಲಾವಣೆಯಾಗಿಲ್ಲ. ದೆಹಲಿಯಲ್ಲಿ ಡಿಸೇಲ್ ಲೀಟರ್ ಗೆ 71.27 ರೂಪಾಯಿಯಂತೆ ಮಾರಾಟವಾಗ್ತಿದೆ.

ಬೆಂಗಳೂರಿನಲ್ಲಿ ಕೂಡ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಮಂಗಳವಾರ ಪೆಟ್ರೋಲ್ ಬೆಲೆ 14 ಪೈಸೆ ಇಳಿಕೆ ಕಂಡಿತ್ತು. ಇಂದು ಲೀಟರ್ ಪೆಟ್ರೋಲ್ ನಿನ್ನೆ ದರ 76.99 ರೂಪಾಯಿಗೆ ಮಾರಾಟವಾಗ್ತಿದೆ. ನವೆಂಬರ್ ತಿಂಗಳಿನಲ್ಲಿ ಈವರೆಗೆ ಪೆಟ್ರೋಲ್ ದರ 3 ರೂಪಾಯಿ ಇಳಿಕೆ ಕಂಡಿದೆ. ಇನ್ನು ಡಿಸೇಲ್ ಬೆಲೆ 2 ರೂಪಾಯಿ ಇಳಿಕೆ ಕಂಡಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಇಳಿಕೆಯಾಗ್ತಿರುವುದು ಪೆಟ್ರೋಲ್-ಡಿಸೇಲ್ ಬೆಲೆ ಇಳಿಕೆಗೆ ಕಾರಣವಾಗಿದೆ. ಇದ್ರ ಜೊತೆ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಸುಧಾರಣೆ ಕಂಡು ಬರುತ್ತಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...