alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಗಿದೆ ಎಟಿಎಂ ನಿಯಮ: ರಾತ್ರಿ 9 ಗಂಟೆ ನಂತ್ರ ನಡೆಯಲ್ಲ ಈ ಕೆಲಸ

ಎಟಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದಲ್ಲಿ ಎಟಿಎಂಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ.

ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ ರಾತ್ರಿ 9 ಗಂಟೆ ನಂತ್ರ ಯಾವುದೇ ಎಟಿಎಂಗಳಿಗೆ ಹಣ ತುಂಬಿಸುವಂತಿಲ್ಲ. ಎಟಿಎಂಗೆ ಹಣ ತುಂಬಿಸುವ ಕ್ಯಾಶ್ ವಾಹನದಲ್ಲಿ 5 ಕೋಟಿಗಿಂತ ಹೆಚ್ಚು ಹಣ ಇರುವಂತಿಲ್ಲ. ಕ್ಯಾಶ್ ವ್ಯಾನ್ ಸಿಬ್ಬಂದಿ ಮೇಲಾಗುವ ದಾಳಿ, ವಾಹನ ಹಿಂಬಾಲಿಸುವವರನ್ನು ತಡೆಯಲು ಹಾಗೂ ಅಪರಾಧಗಳ ವಿರುದ್ಧ ಹೋರಾಡಲು ಸಿಬ್ಬಂದಿಗೆ ತರಬೇತಿ ನೀಡಲು ನಿರ್ಧರಿಸಲಾಗಿದೆ.

ಕ್ಯಾಶ್ ವ್ಯಾನ್ ನಲ್ಲಿರುವ ಎಲ್ಲ ಸಿಬ್ಬಂದಿ ಹಿನ್ನೆಲೆ ಪರಿಶೀಲನೆ ನಡೆಸಲು ಗೃಹ ಸಚಿವಾಲಯ ಸೂಚನೆ ನೀಡಿದೆ. ಗ್ರಾಮೀಣ ಪ್ರದೇಶಗಳ ನಿಯಮಗಳಲ್ಲೂ ಬದಲಾವಣೆ ಮಾಡಲಾಗಿದೆ. ಗ್ರಾಮೀಣ ಪ್ರದೇಶಗಳ ಎಟಿಎಂಗಳಿಗೆ ಸಂಜೆ 6ರ ನಂತ್ರ ಹಣ ತುಂಬುವಂತಿಲ್ಲ. ಹಿಂದಿನ ದಿನ ಅಥವಾ ದಿನದ ಆರಂಭದಲ್ಲಿಯೇ ಕ್ಯಾಶ್ ವ್ಯಾನ್ ಗಳು ಬ್ಯಾಂಕ್ ನಿಂದ ಹಣ ಪಡೆದಿರಬೇಕೆಂದು ಹೇಳಲಾಗಿದೆ.

ಕ್ಯಾಶ್ ವ್ಯಾನ್ ಗಳಿಗೆ ಜಿ ಎಸ್ಎಂ ಆಧಾರಿತ ಸ್ವಯಂ ಡಯಲರ್ ಭದ್ರತಾ ಎಚ್ಚರಿಕೆ  ಮತ್ತು ಯಾಂತ್ರಿಕೃತ ಸೈರನ್ ಅಳವಡಿಸಲಾಗುವುದು. ನಗದು ವ್ಯಾನ್ ಗಳ ಸುರಕ್ಷಿತೆಗಾಗಿ ಈ ಕ್ರಮಕೈಗೊಳ್ಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...