alex Certify
ಕನ್ನಡ ದುನಿಯಾ       Mobile App
       

Kannada Duniya

ರಿಲಯೆನ್ಸ್ ಜಿಯೋ- ಏರ್ಟೆಲ್ ಮಧ್ಯೆ ವಾಕ್ಸಮರ

airtel-vs-reliancejioರಿಲಯೆನ್ಸ್  ಜಿಯೋ ಹಾಗೂ ಏರ್ಟೆಲ್ ಮಧ್ಯೆ ಪೈಪೋಟಿಯ ಜೊತೆಗೆ ವಾಕ್ಸಮರವೂ ಶುರುವಾಗಿದೆ. ಪರಸ್ಪರ ಆರೋಪ- ಪ್ರತ್ಯಾರೋಪಗಳು ತಾರಕಕ್ಕೇರುತ್ತಿವೆ.

ಜಿಯೋ ಕರೆಗಳು ವಿಫಲವಾಗುತ್ತಿರುವುದು ದುರದೃಷ್ಟಕರ ಮತ್ತು ಸಂಸ್ಥೆ ಗ್ರಾಹಕರನ್ನು ದಿಕ್ಕುತಪ್ಪಿಸುತ್ತಿದೆ ಅಂತಾ ಏರ್ಟೆಲ್ ಆರೋಪ ಮಾಡಿತ್ತು. ಇದಕ್ಕೆ ರಿಲಯೆನ್ಸ್ ತಿರುಗೇಟು ನೀಡಿದ್ದು, ಜಿಯೋ ನೆಟ್ವರ್ಕ್ ನಡುವಣ ಯಾವ ಕರೆಗಳೂ ವಿಫಲವಾಗಿಲ್ಲ. ಜಿಯೋನಿಂದ ಉಳಿದ ನೆಟ್ವರ್ಕ್ ಗಳಿಗೆ ಕರೆ ಮಾಡಿದ ಸಂದರ್ಭದಲ್ಲಿ ಕೊಂಚ ಅಡಚಣೆಯಾಗಿದ್ದು ನಿಜ ಅಂತಾ ಹೇಳಿದೆ. ಜಿಯೋನಿಂದ ಜಿಯೋಗೆ ಮಾಡುವ ಕರೆಗಳಲ್ಲಿ ಗ್ರಾಹಕರಿಗೆ ಎಚ್ ಡಿ ಗುಣಮಟ್ಟದ ಧ್ವನಿ ಸೇವೆ ಒದಗಿಸಲಾಗುತ್ತಿದೆ ಅಂತಾ ತಿಳಿಸಿದೆ.

ಜಿಯೋ ನೆಟ್ವರ್ಕ್ ನಲ್ಲಿ ಯಾವುದೇ ಕರೆಗಳು ವಿಫಲವಾಗದಂತೆ ನೋಡಿಕೊಳ್ಳಲಾಗ್ತಿದೆ ಅನ್ನೋದು ರಿಲಯೆನ್ಸ್ ವಾದ. ಬೇರೆ ನೆಟ್ವರ್ಕ್ ಗಳಿಗೆ ಕರೆ ಮಾಡುವಾಗ ಸಮಸ್ಯೆಯಾಗುತ್ತಿರುವುದನ್ನು ಒಪ್ಪಿಕೊಂಡಿರುವ ಸಂಸ್ಥೆ, ಪ್ರತಿ ದಿನ 2 ಕೋಟಿ ಕರೆಗಳು ವಿಫಲವಾಗುತ್ತಿವೆ ಅಂತಾ ತಿಳಿಸಿದೆ. ಈ ಮಧ್ಯೆ ಗ್ರಾಹಕರ ಎಂ ಎನ್ ಪಿ ರಿಕ್ವೆಸ್ಟ್ ಗಳನ್ನು ಬ್ಲಾಕ್ ಮಾಡುತ್ತಿರುವ ಏರ್ಟೆಲ್ ವಿರುದ್ಧ ರಿಲಯೆನ್ಸ್ ಜಿಯೋ ಕಿಡಿಕಾರಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...