alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಮೊಬೈಲ್ ನಂಬರ್ ಗೆ ಇನ್ಮುಂದೆ ಅಗತ್ಯವಿಲ್ಲ ಆಧಾರ್

ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್ ಮಾಡುವ ಅವಶ್ಯಕತೆ ಈಗಿಲ್ಲ. ಟೆಲಿಕಾಂ ಕಂಪನಿಗಳು ಇನ್ಮುಂದೆ ಆಧಾರ್ ಜಾಗದಲ್ಲಿ ಹೊಸ ಐಡಿಯನ್ನು ಬಳಸಲಿವೆ. ಸರ್ಕಾರ ಟೆಲಿಕಾಂ ಕಂಪನಿಗಳಿಗೆ ಸಿಸ್ಟಂ ಹಾಗೂ ನೆಟ್ವರ್ಕ್ ನಲ್ಲಿ ಬದಲಾವಣೆ ತರುವಂತೆ ಸೂಚನೆ ನೀಡಿದೆ.

ಟೆಲಿಕಾಂ ಕಂಪನಿಗಳು ಇನ್ಮುಂದೆ ಆಧಾರ್ ನಂಬರ್ ಬದಲು ವರ್ಚುವಲ್ ಐಡಿಯನ್ನು ಬಳಸಲಿವೆ. ಮೊಬೈಲ್ ಚಂದಾದಾರರಿಗೆ ಲಿಮಿಡೆಟ್ ಕೆವೈಸಿ ವ್ಯವಸ್ಥೆ ಜಾರಿಗೆ ಬರಲಿದೆ. ಜುಲೈ ಒಂದರಿಂದ ವರ್ಚುವಲ್ ಐಡಿ ವ್ಯವಸ್ಥೆ ಜಾರಿಗೆ ಬರಲಿದೆ. ಗ್ರಾಹಕರು ಆಧಾರ್ ಐಡಿ ಬದಲು ವರ್ಚುವಲ್ ಐಡಿ ಬಳಸಬಹುದಾಗಿದೆ.

ವ್ಯಕ್ತಿಯ ಆಧಾರ್ ಐಡಿಯನ್ನು ನಕ್ಷೆಯಾಗಿಟ್ಟುಕೊಂಡು ತಯಾರಿಸಿರುವ 16 ಅಂಕಗಳ ಐಡಿಗೆ ವರ್ಚುವಲ್ ಐಡಿ ಎಂದು ಕರೆಯಲಾಗುತ್ತದೆ. ಮುಂದಿನ ತಿಂಗಳು ಇದು ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ. ವರ್ಚುವಲ್ ಐಡಿ ಜಾರಿಗೆ ಬರುವುದ್ರಿಂದ ಆಧಾರ್ ಡೇಟಾದ ಗೌಪ್ಯತೆ ಮತ್ತಷ್ಟು ಸುರಕ್ಷಿತವಾಗಿರಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...