alex Certify
ಕನ್ನಡ ದುನಿಯಾ       Mobile App
       

Kannada Duniya

ವಿದ್ಯುತ್ ದ್ವಿಚಕ್ರ ವಾಹನ ಬಳಕೆಯಿಂದ ಉಳಿಕೆಯಾಗುವ ಹಣವೆಷ್ಟು ಗೊತ್ತಾ…?

ನವದೆಹಲಿ: ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಹೆಚ್ಚಿನ ಬಳಕೆಯಿಂದ, ಇಂಧನ ಆಮದಿಗೆ ಭಾರತ ವ್ಯಯಿಸುವ ಹಣದಲ್ಲಿ‌ ವಾರ್ಷಿಕ 1.2 ಲಕ್ಷ ಕೋಟಿ ರೂ.‌ಉಳಿತಾಯ ಮಾಡಬಹುದು ಎಂದು‌ ನೀತಿ ಆಯೋಗ ತಿಳಿಸಿದೆ.

ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬಳಕೆಗೆ ಉತ್ತೇಜನ ನೀಡಬೇಕು ಎಂದು ತನ್ನ ವರದಿಯಲ್ಲಿ ತಿಳಿಸಿರುವ ನೀತಿ ಆಯೋಗದ ವರದಿ, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಿಂದ ಇಂಧನ ದರ ಗಗನಮುಖಿಯಾಗಿರುವ ಈ ಸಮಯದಲ್ಲಿ ಆಶಾಕಿರಣವಾಗಿ ಕಾಣಿಸಿದೆ.

‘ಶೂನ್ಯ ಮಾಲಿನ್ಯ‌ ವಾಹನಗಳು(ಜಡ್ಇವಿ): ನೀತಿ ನಿರೂಪಣೆಯ ಕಡೆಗೆ ಪಯಣ’ ಎಂಬ ವರದಿಯಲ್ಲಿ, ಈಗಿರುವ ಅಂತರ್ದಹನ ಇಂಜಿನ್(ಐಸಿಇ) ಗಳನ್ನು ವಿದ್ಯುತ್ ವಾಹನಗಳಾಗಿ(ಇವಿ) ಅತ್ಯಂತ ತ್ವರಿತಗತಿಯಲ್ಲಿ ಪರಿವರ್ತಿಸಲು ಸೂಚಿಸಿದೆ.

ಅಂತಾರಾಷ್ಟ್ರೀಯ ಸಮಾವೇಶವೊಂದರಲ್ಲಿ‌ ವರದಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಾಗಿದೆ. ಭಾರತದಲ್ಲಿ 17 ಕೋಟಿ ದ್ವಿಚಕ್ರ ವಾಹನಗಳಿವೆ. ಪ್ರತಿ ವಾಹನ ಪ್ರತಿ ದಿನ ಸರಾಸರಿ ಅರ್ಧ ಲೀಟರ್ ಪೆಟ್ರೋಲ್ ಬಳಸುತ್ತವೆ.

ಈ ವಾಹನಗಳಿಂದ ಒಟ್ಟಾರೆ 3400 ಕೋಟಿ ಲೀಟರ್ ಪೆಟ್ರೋಲ್ ಬಳಕೆ ಆಗುತ್ತದೆ. ಪ್ರತಿ ಲೀಟರ್ ಗೆ 70 ರೂ.ನಂತೆ ಒಟ್ಟು 2.4 ಲಕ್ಷ ಕೋಟಿ ರೂ.‌ಆಗುತ್ತದೆ. ತೆರಿಗೆ ಇನ್ನಿತರ ಖರ್ಚನ್ನು ಹೊರತುಪಡಿಸಿ ಶೇ.50 ರಷ್ಟು ಇದರಲ್ಲಿ ಆಮದು ಕಚ್ಚಾತೈಲದ ದರ ಎಂದುಕೊಂಡರೂ 1.2 ಲಕ್ಷ ಕೋಟಿ ರೂ.‌ಮೊತ್ತದ ಆಮದು ತೈಲವಾಗುತ್ತದೆ. ಮುಂದಿನ 5-6 ವರ್ಷದಲ್ಲಿ ಇದನ್ನು ಸಾಧಿಸಬಹುದು. ಸರ್ಕಾರ, ಕೈಗಾರಿಕೆಗಳ ಸಹಕಾರ ಹಾಗೂ ಸಂಶೋಧನೆಯ ಅಗತ್ಯವಿದೆ ಎಂದು ವರದಿ ತಿಳಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...