alex Certify
ಕನ್ನಡ ದುನಿಯಾ       Mobile App
       

Kannada Duniya

OMG! ನೀತಾ ಅಂಬಾನಿ ಪಡೆಯುತ್ತಿದ್ದ ಸಂಬಳವೆಷ್ಟು ಗೊತ್ತಾ?

ನೀತಾ ಅಂಬಾನಿ ಭಾರತದ ಅತಿ ಶ್ರೀಮಂತ ಮಹಿಳೆಯಲ್ಲೊಬ್ಬರು. ಭಾರತದ ಅತ್ಯಂತ ಸಿರಿವಂತ ಎನಿಸಿಕೊಂಡಿರುವ ಉದ್ಯಮಿ ಮುಕೇಶ್ ಅಂಬಾನಿ ಅವರ ಪತ್ನಿ. ಇತ್ತೀಚೆಗಷ್ಟೆ ನೀತಾ ಅಂಬಾನಿ 54ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನೀತಾ ಅಂಬಾನಿ ಹುಟ್ಟಿನಿಂದ್ಲೇ ಶ್ರೀಮಂತೆ ಆಗಿರಲಿಲ್ಲ.

ಮುಂಬೈನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು ನೀತಾ. ಪದವಿ ಪೂರ್ಣಗೊಳಿಸಿರಲಿಲ್ಲ, ಅಷ್ಟರಲ್ಲೇ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದ್ರು. ಆಗ ನೀತಾಗೆ ಬರುತ್ತಿದ್ದ ಸಂಬಳ ಕೇವಲ 800 ರೂಪಾಯಿ. ಭರತನಾಟ್ಯ ಪ್ರವೀಣೆಯಾಗಿದ್ದ ನೀತಾ ಕಾರ್ಯಕ್ರಮ ನೀಡಲು ಬೇರೆ ಬೇರೆ ದೇಶಗಳಿಗೆ ಹೋಗಿ ಬರುತ್ತಿದ್ದರು.

ಆ ಸಮಯದಲ್ಲಿ ನೀತಾರನ್ನು ನೋಡಿದ್ದ ಧೀರೂಭಾಯ್ ಅಂಬಾನಿ ತಮ್ಮ ಹಿರಿಯ ಮಗ ಮುಕೇಶ್ ಅಂಬಾನಿಯನ್ನು ಮದುವೆಯಾಗುವಂತೆ ಕೇಳಿಕೊಂಡಿದ್ದರು. ಮದುವೆ ನಂತರವೂ ಶಿಕ್ಷಕಿಯಾಗಿ ಕೆಲಸ ಮಾಡಬೇಕೆಂಬ ಆಸೆ ನೀತಾಗಿತ್ತು. ಪತ್ನಿಯ ಆಸೆಗೆ ಮುಕೇಶ್ ಅಂಬಾನಿ ಕೂಡ ನೀರೆರೆದಿದ್ದರು.

ಖಾಸಗಿ ಸ್ಕೂಲ್ ನಲ್ಲಿ ನೀತಾ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಂಡ್ರು. ಆ ಸಮಯದಲ್ಲಿ ನೀತಾ ಅಂಬಾನಿ ಇಷ್ಟು ಶ್ರೀಮಂತ ಕುಟುಂಬದವರು ಅನ್ನೋದು ಶಾಲೆಯಲ್ಲಿ ಯಾರಿಗೂ ಗೊತ್ತಿರಲಿಲ್ಲ. 1987ರ ವಿಶ್ವಕಪ್ ವೇಳೆ ವಿದ್ಯಾರ್ಥಿಯ ಪೋಷಕರೊಬ್ಬರು ಪಂದ್ಯದ ಎರಡು ಟಿಕೆಟ್ ಕೊಡುವುದಾಗಿ ಹೇಳಿದ್ದರಂತೆ.

ಆದ್ರೆ ನೀತಾ ಅಂಬಾನಿ ಇದನ್ನು ತಿರಸ್ಕರಿಸಿದ್ದರು. ಮ್ಯಾಚ್ ನೋಡಲು ಬಂದಿದ್ದ ಅವರಿಗೆ ನೀತಾರನ್ನು ವಿಐಪಿ ಬಾಕ್ಸ್ ನಲ್ಲಿ ನೋಡಿ ಅಚ್ಚರಿಯಾಗಿತ್ತು. ರಿಲಯೆನ್ಸ್ ಗ್ರೂಪ್ ಕೂಡ ಪಂದ್ಯದ ಪ್ರಾಯೋಜಕತ್ವ ಪಡೆದಿತ್ತು. ಕೆಲವರ್ಷಗಳ ನಂತರ ನೀತಾ ಶಿಕ್ಷಕ ವೃತ್ತಿ ತೊರೆದು, ರಿಲಯೆನ್ಸ್ ಗ್ರೂಪ್ ಉದ್ಯಮದಲ್ಲಿ ತೊಡಗಿಕೊಂಡ್ರು.

ಈಗ ಭವಿಷ್ಯದಲ್ಲಿ ತಾವು ಕೂಡ ಶಿಕ್ಷಕರಾಗಬೇಕು ಅನ್ನೋದು ಮುಕೇಶ್ ಅಂಬಾನಿ ಅವರ ಆಸೆ. ಹಾಗಾಗಿ ಮುಂದಿನ ದಿನಗಳಲ್ಲಿ ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಇಬ್ಬರೂ ಶಿಕ್ಷಣ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲಿದ್ದಾರಂತೆ. ಶಿಕ್ಷಕ ವೃತ್ತಿ ಅತ್ಯಂತ ತೃಪ್ತಿ ಕೊಡುವ ಕೆಲಸ ಅಂತಾ ಮುಕೇಶ್ ಅಂಬಾನಿ ಹೇಳಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...