alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಗೂ ವಂಚಕ ನೀರವ್ ಮೋದಿ ಸುಳಿವು ಪತ್ತೆ

ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಸಾವಿರಾರು ಕೋಟಿ ರೂಪಾಯಿ ಪಂಗನಾಮ ಹಾಕಿರುವ ವಜ್ರದ ವ್ಯಾಪಾರಿ ನೀರವ್ ಮೋದಿ ಇಂಗ್ಲೆಂಡ್ ನಲ್ಲಿರುವ ಕುರಿತು ಖಚಿತವಾಗಿದ್ದು, ನೀರವ್ ರನ್ನು ಹಸ್ತಾಂತರಿಸುವಂತೆ ಸಿಬಿಐ ಮನವಿ ಮಾಡಿದೆ.

ಪಿ.ಎನ್.ಬಿ. ಗೆ ನೀರವ್ ಮೋದಿ ಹಾಗೂ ಆತನ ಸಂಬಂಧಿ ಮೆಹುಲ್ ಚೋಕ್ಸಿ ವಂಚಿಸಿದ್ದರು. ಬ್ಯಾಂಕ್ ಗೆ 13,500 ಕೋಟಿ ವಂಚಿಸಿರುವ ಆರೋಪ ಇಬ್ಬರೂ ಉದ್ಯಮಿಗಳ ಮೇಲಿದೆ.

ಲಂಡನ್ ನಲ್ಲಿರುವ ಭಾರತೀಯ ಹೈ ಕಮೀಷನ್, ಇಂಗ್ಲೆಂಡ್ ಸರ್ಕಾರವನ್ನು ವಂಚಕ ನೀರವ್ ರನ್ನು ಹಸ್ತಾಂತರಿಸುವಂತೆ ಕೋರಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸಭೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನೀರವ್ ಮೋದಿಯವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಮನವಿ ಕಳುಹಿಸಲಾಗಿದೆ ಎಂದು ತಿಳಿಸಿದೆ.

2009 ರಿಂದ ದೇಶ ಭ್ರಷ್ಟ ಅಪರಾಧಿಗಳ ಪೈಕಿ 29 ಜನ ಇಂಗ್ಲೆಂಡ್ ಗೆ ಹೋಗಿ ತಲೆಮರೆಸಿಕೊಂಡಿದ್ದಾರೆ. ಮದ್ಯದ ದೊರೆ ವಿಜಯ್ ಮಲ್ಯ ಹಸ್ತಾಂತರ ಪ್ರಕರಣ ಸಹ ಎಲ್ಲರ ಗಮನ ಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...