alex Certify
ಕನ್ನಡ ದುನಿಯಾ       Mobile App
       

Kannada Duniya

ನಷ್ಟದ ಸುಳಿಯಲ್ಲಿ ನೈಕಿ, ಶೇ.35 ರಷ್ಟು ಮಳಿಗೆಗಳು ಬಂದ್

nike 1ಭಾರತದಲ್ಲಿ ಫಿಟ್ನೆಸ್ ಬಗ್ಗೆ ಜನರು ಹೆಚ್ಹೆಚ್ಚು ಕಾಳಜಿ ವಹಿಸಲು ಆರಂಭಿಸಿದ್ದಾರೆ. ಆದ್ರೂ ಉತ್ಪನ್ನಗಳನ್ನು ಖರೀದಿಸುವಂತೆ ಯುವಜನತೆಯ ಮನವೊಲಿಸುವಲ್ಲಿ ಅಮೆರಿಕದ ಕ್ರೀಡಾ ಉತ್ಪನ್ನ ತಯಾರಿಕಾ ಸಂಸ್ಥೆ ನೈಕಿ ವಿಫಲವಾಗಿದೆ.

ನೈಕಿ, ಸ್ಪೋರ್ಟ್ಸ್ ಶೂಸ್ ಹಾಗೂ ದಿರಿಸು ತಯಾರಿಸುವ ವಿಶ್ವದ ಅತಿ ದೊಡ್ಡ ಕಂಪನಿ. ಇದೀಗ ನಷ್ಟದಿಂದ ಕಂಗಾಲಾಗಿದೆ. ಈಗಾಗ್ಲೇ ಭಾರತದಲ್ಲಿ ಶೇ.35 ರಷ್ಟು ಮಳಿಗೆಗಳನ್ನು ನೈಕಿ ಬಂದ್ ಮಾಡಿದೆ. ಸದ್ಯ ಒಟ್ಟು 200 ಮಳಿಗೆಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.

2014-15 ರಲ್ಲಿ ನೈಕಿ ಕಂಪನಿಗೆ 541 ಕೋಟಿ ರೂಪಾಯಿ ನಷ್ಟವಾಗಿತ್ತು. ಎದುರಾಳಿ ಸಂಸ್ಥೆ ಅಡಿಡಾಸ್ ಗೆ 68 ಕೋಟಿ ರೂಪಾಯಿ ನಷ್ಟವಾದ್ರೆ, ರೀಬಾಕ್ ಬರೋಬ್ಬರಿ 2198 ಕೋಟಿ ರೂಪಾಯಿ ಲಾಸ್ ಮಾಡಿಕೊಂಡಿತ್ತು. ಆದ್ರೆ ಜರ್ಮನಿಯ ಕ್ರೀಡಾ ಉತ್ಪನ್ನ ತಯಾರಕ ಸಂಸ್ಥೆ ಪೂಮಾ 47 ಕೋಟಿ ರೂಪಾಯಿ ಲಾಭ ಗಳಿಸಿತ್ತು.

ನಷ್ಟದ ಹಿನ್ನೆಲೆಯಲ್ಲಿ ನೈಕಿ ಕಂಪನಿ ತನ್ನ ಪಾಲುದಾರರ ಸಂಖ್ಯೆಯಲ್ಲಿ ಕೂಡ ಕಡಿತಗೊಳಿಸಿದೆ. ಭಾರತದ ಸ್ಟಾರ್ ಕ್ರಿಕೆಟರ್ ಗಳಿಗೆ ಬ್ಯಾಟ್ ಸ್ಪಾನ್ಸರ್ ಮಾಡುವ ಬಗ್ಗೆ ಕೂಡ ನೈಕಿ ಮರುಚಿಂತನೆ ನಡೆಸಿದೆ. ಇದಕ್ಕಾಗಿಯೇ ನೈಕಿ ವರ್ಷಕ್ಕೆ 60 ಕೋಟಿ ರೂಪಾಯಿ ವ್ಯಯಿಸುತ್ತಿದೆ. ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್ ಸೇರಿ ಹಲವರು ನೈಕಿ ಬ್ಯಾಟ್ ಬಳಸುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...