alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ಪಟ್ಟು ಹೆಚ್ಚಾಗಲಿದೆ ವೈಫೈ ಸ್ಪೀಡ್..!

WI FI SPEEDಇಂಟರ್ನೆಟ್ ಬಳಕೆದಾರರಿಗೆಲ್ಲ ಗುಡ್ ನ್ಯೂಸ್ ಇದೆ. ನೀವು ವೈಫೈ ತಂತ್ರಜ್ಞಾನ ಬಳಸ್ತಾ ಇದ್ರೆ ಇನ್ಮೇಲೆ ಅದರ ಸ್ಪೀಡ್ 3 ಪಟ್ಟು ಹೆಚ್ಚಾದ್ರೂ ಅಚ್ಚರಿಯಿಲ್ಲ.

ಎಂಐಟಿ ಕಂಪ್ಯೂಟರ್ ಸೈನ್ಸ್ ಹಾಗೂ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಲ್ಯಾಬ್ ನ ಸಂಶೋಧಕರ ತಂಡ MegaMIMO ತಂತ್ರಜ್ಞಾನವನ್ನು ಕಂಡುಹಿಡಿದಿದೆ. ಇದು ಸದ್ಯ ಇರುವ ವೈಫೈ ಟೆಕ್ನಾಲಜಿಗಿಂತ 3 ಪಟ್ಟು ವೇಗವಾಗಿ ಕಾರ್ಯನಿರ್ವಹಿಸಲಿದೆ.

ಇದು ಸಾಂಪ್ರದಾಯಿಕ ವೈಫೈ ಸ್ಪೆಕ್ಟ್ರಮ್ ನ ಪ್ರಮುಖ ಸಮಸ್ಯೆಯಾದ ದಟ್ಟಣೆಗೆ ಪರಿಹಾರ ಒದಗಿಸಲಿದೆ. ವೈಫೈ ರೂಟರ್ ಪ್ರಸಾರಕ್ಕೆ ಯತ್ನಿಸಿದಾಗ ಅದೇ ಫ್ರೀಕ್ವೆನ್ಸಿ ಇರುವ ಹತ್ತಿರದ ಡಿವೈಸ್ ಹಸ್ತಕ್ಷೇಪ ಮಾಡಬಹುದು. ಇದರಿಂದ ನಿಮ್ಮ ಡೇಟಾ ಪ್ಯಾಕ್ ಖಾಲಿಯಾಗೋ ಸಾಧ್ಯತೆ ಇರುತ್ತದೆ.

ಜೊತೆಗೆ ನಿಮ್ಮ ವೈರ್ ಲೆಸ್ ನೆಟ್ ವರ್ಕ್ ನಿಧಾನವಾಗಬಹುದು. ಆದ್ರೆ ಈ MIMO ತಂತ್ರಜ್ಞಾನದಲ್ಲಿ ಮಲ್ಟಿಪಲ್ ಟ್ರಾನ್ಸ್ ರಿಸೀವರ್ ಗಳಿವೆ. ವೈಫೈ ಎಕ್ಸೆಸ್ ಪಾಯಿಂಟ್ ನ ಅಂಟೆನಾಗಳು ಒಂದೇ ಸಮಯದಲ್ಲಿ ಬೇರೆ ಬೇರೆ ನೆಟ್ ವರ್ಕ್ ರಿಸೀವರ್ ಗಳಲ್ಲಿ ಕೆಲಸ ಮಾಡುತ್ತವೆ. ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತವೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...