alex Certify
ಕನ್ನಡ ದುನಿಯಾ       Mobile App
       

Kannada Duniya

ವಾಟ್ಸಾಪ್ ನಲ್ಲಿ ಬಂದಿದೆ ಹೊಸ ಫೀಚರ್…!

ವಾಟ್ಸಾಪ್ ಮೆಸೇಜ್ ಗಳನ್ನು ಎಷ್ಟೋ ಬಾರಿ ಡಿಲೀಟ್ ಮಾಡಲೇಬೇಕಾದ ಅನಿವಾರ್ಯತೆ ಎದುರಾಗುತ್ತಿತ್ತು. ಫೋನ್ ನಲ್ಲಿ ಸ್ಪೇಸ್ ಇಲ್ಲದೇ ಇರೋದ್ರಿಂದ ತೀರಾ ಅಗತ್ಯ ಎನಿಸಿದ ಮೆಸೇಜ್ ಗಳನ್ನು ಕೂಡ ಡಿಲೀಟ್ ಮಾಡಬೇಕಾಗುತ್ತಿತ್ತು. ಆದ್ರೆ ಇನ್ಮೇಲೆ ಅಂಥ ತಲೆನೋವಿಲ್ಲ.

ಆ್ಯಂಡ್ರಾಯ್ಡ್ ಮೊಬೈಲ್ ನಲ್ಲಿ ವಾಟ್ಸಾಪ್ ಬೀಟಾ ವರ್ಶನ್ ನ ಹೊಸ ಫೀಚರ್ ಲಭ್ಯವಾಗಲಿದೆ. ಇದರಲ್ಲಿ ಮೆಸೇಜ್ ಗಳನ್ನು ಡಿಲೀಟ್ ಮಾಡದೆಯೇ ನೀವು ಸ್ಪೇಸ್ ಉಳಿಸಿಕೊಳ್ಳಬಹುದು. ಸದ್ಯದಲ್ಲೇ ಈ ಫೀಚರ್ iOSನಲ್ಲೂ ಲಭ್ಯವಾಗಲಿದೆ.

ಆ್ಯಂಡ್ರಾಯ್ಡ್ ನ ಸೆಟ್ಟಿಂಗ್ ಮೆನುವಿನಲ್ಲಿ ಹೊಸ ಸ್ಟೋರೇಜ್ ಮ್ಯಾನೇಜ್ಮೆಂಟ್ ಸೆಕ್ಷನ್ ಇದೆ. ಅಲ್ಲಿ ನೀವು ಮೆಸೇಜ್, ಇಮೇಜ್, ವಿಡಿಯೋ, ಜಿಐಎಫ್ ಗಾಗಿ ಬಳಸಿದ ಸ್ಪೇಸ್ ನ ಸಂಪೂರ್ಣ ವಿವರ ಲಭ್ಯವಾಗಲಿದೆ. ಇದಕ್ಕಾಗಿ ಆ್ಯಂಡ್ರಾಯ್ಡ್ ಬೀಟಾ ವರ್ಶನ್ 2.17.340 ಡೌನ್ಲೋಡ್ ಮಾಡಿಕೊಳ್ಳಿ.

ಸೆಟ್ಟಿಂಗ್ಸ್ – ಡೇಟಾ & ಸ್ಟೋರೇಜ್ ಯೂಸ್ – ಸ್ಟೋರೇಜ್ ಯೂಸ್ ಕ್ಲಿಕ್ ಮಾಡಿ. ನಿಮ್ಮ ಕಾಂಟಾಕ್ಟ್ ನಲ್ಲಿರೋ ಪ್ರತಿ ಚಾಟ್ ಗೆ ತೆಗೆದುಕೊಂಡಿರುವ ಪ್ರತ್ಯೇಕ ಸ್ಪೇಸ್ ವಿವರ ಲಭ್ಯವಾಗುತ್ತದೆ. ಈಸಿಯಾಗಿ ನಿಮಗೆ ಬೇಡವಾಗಿದ್ದನ್ನು ಡಿಲೀಟ್ ಮಾಡಬಹುದು. ಕೆಳಭಾಗದಲ್ಲಿರೋ ಮ್ಯಾನೇಜ್ ಮೆಸೇಜ್ ಬಟನ್ ಒತ್ತಿದ್ರೆ ಬೇಡದ ಮೆಸೇಜ್ ಗಳು ಡಿಲೀಟ್ ಆಗುತ್ತವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...