alex Certify
ಕನ್ನಡ ದುನಿಯಾ       Mobile App
       

Kannada Duniya

ನಿಂಜಾ ಬೈಕ್ ಬೆಲೆಯಲ್ಲಿ 62 ಸಾವಿರ ರೂ. ಕಡಿತ

ಹೈ ಎಂಡ್ ಬೈಕ್ ಗಳ ಶ್ರೇಣಿಯಲ್ಲಿ ಗುರುತಿಸಿಕೊಂಡಿರುವ ಇಂಡಿಯಾ ಕವಾಸಕಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ಶುಕ್ರವಾರ ನಿಂಜಾ 300 ಬೈಕ್ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಲ್ಲದೆ ಹಿಂದಿನ ದರಕ್ಕಿಂತಲೂ 62 ಸಾವಿರ ರೂಪಾಯಿ ದರವನ್ನು ಕಡಿತಗೊಳಿಸಿದೆ.

ಎರಡು ಆಕರ್ಷಕ ಕಲರ್ ಗಳಲ್ಲಿ ಈ ಬೈಕ್ ಗ್ರಾಹಕರನ್ನು ಆಕರ್ಷಿಸಲಿದೆ. ಕಂಪನಿಯ ಈ ಬೈಕ್ ಬೆಲೆಯನ್ನು 2.98 ಲಕ್ಷ ಎಂದು ನಿಗದಿ ಮಾಡಿದೆ. ಈ ಅಪ್ ಡೇಟ್ ವಾಹನದಲ್ಲಿ, ಹೊಸ ವಿನ್ಯಾಸದ ಗ್ರಾಫಿಕ್ಸ್ ಡಿಸೈನ್ ಮಾಡಲಾಗಿದೆ. ಈ ಬೈಕ್, ನಿಂಜಾ 400 ದ್ವಿಚಕ್ರ ವಾಹನಕ್ಕಿಂತ 1.71 ಲಕ್ಷ ಕಡಿಮೆ ದರದಲ್ಲಿ ಸಿಗಲಿದೆ.

ಮೇಕ್ ಇನ್ ಇಂಡಿಯಾ ಯೋಜನೆಯಡಿ ಕಂಪನಿ ಸ್ಥಳೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಹೊಸ ಬೈಕ್ ತಯಾರಿಸಿದೆ. ಈ ಬೈಕ್ ನ ತೂಕ ಸುಮಾರು 179 ಕೆ.ಜಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...