alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ವಂಚನೆ ತಡೆಯುತ್ತೆ ಸಿಬಿಇಸಿ ಹೊಸ ಫಾರ್ಮ್

ಸಿಬಿಇಸಿ ಜಿ.ಎಸ್.ಟಿ. ವಾರ್ಷಿಕ ರಿಟರ್ನ್ ಫಾರ್ಮ್ GSTR 9 ಮತ್ತು GSTR 9A ಬಿಡುಗಡೆ ಮಾಡಿದೆ. ಹೊಸ ವಾರ್ಷಿಕ ರಿಟರ್ನ್ ಫಾರ್ಮ್ ತೆರಿಗೆ ವಂಚನೆ ಹಾಗೂ ಅದ್ರ ಬಗ್ಗೆ ಮೇಲ್ವಿಚಾರಣೆ ನಡೆಸಲು ನೆರವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಫಾರ್ಮ್ ನಲ್ಲಿ ತೆರಿಗೆದಾರರು ಇಡೀ ವರ್ಷದ ಹಣದ ವ್ಯವಹಾರಗಳ ಬಗೆಗಿನ ವಿವರವನ್ನು ತುಂಬಬೇಕಾಗುತ್ತದೆ. ಕೆಲ ದಿನಗಳ ಹಿಂದಷ್ಟೇ ವಿತ್ತ ಸಚಿವಾಲಯ ಹೊಸ ವಾರ್ಷಿಕ ರಿಟರ್ನ್ ಫಾರ್ಮ್ ಗೆ ಒಪ್ಪಿಗೆ ನೀಡಿದೆ. ಇದ್ರಲ್ಲಿ ಮಾರಾಟ, ಖರೀದಿ ಹಾಗೂ ಐಟಿಸಿ ಬಗ್ಗೆ ಮಾಹಿತಿ ನೀಡಬೇಕು. ತೆರಿಗೆದಾರ 2017-2018 ನೇ ವರ್ಷದ ಹಣಕಾಸು ವ್ಯವಹಾರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಬೇಕಾಗುತ್ತದೆ.

ಸಾಮಾನ್ಯ ತೆರಿಗೆದಾರರು GSTR 9 ಹಾಗೂ ಸಂಯೋಜಿತ ಯೋಜನೆಯಡಿ ಬರುವ ತೆರಿಗೆದಾರರು GSTR 9A ಫಾರ್ಮ್ ತುಂಬಬೇಕಾಗುತ್ತದೆ. ಫಾರ್ಮ್ ತುಂಬಲು ಡಿಸೆಂಬರ್ 31 ಕೊನೆ ದಿನವಾಗಿದೆ. 2017ರಿಂದ ಸರಕು ಹಾಗೂ ಸೇವಾ ತೆರಿಗೆ ಜಾರಿಗೆ ಬಂದಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...