alex Certify
ಕನ್ನಡ ದುನಿಯಾ       Mobile App
       

Kannada Duniya

ತೆರಿಗೆ ಪಾವತಿದಾರರಿಗೆ ಖುಷಿ ಸುದ್ದಿ….

ಆದಾಯ ತೆರಿಗೆ ದರ ಕಡಿಮೆ ಮಾಡಿ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿಸುವುದು ಕೇಂದ್ರ ಸರ್ಕಾರದ ಉದ್ದೇಶ. ಇದಕ್ಕಾಗಿ ಹೊಸ ನೇರ ತೆರಿಗೆ ಕೋಡ್ ಜಾರಿಗೆ ಬರಲಿದೆ. ಮೋದಿ ಸರ್ಕಾರ ಇದಕ್ಕಾಗಿಯೇ ತಜ್ಞರ ಸಮಿತಿಯೊಂದನ್ನು ಕೂಡ ನೇಮಕ ಮಾಡಿದೆ.

ಹಾಗಾಗಿ ತೆರಿಗೆ ಪಾವತಿದಾರರಿಗೆ ಸದ್ಯದಲ್ಲೇ ಕೊಂಚ ರಿಲೀಫ್ ಸಿಗಬಹುದು. ಅಧಿಕೃತವಾಗಿ ಹೊಸ ನೇರ ತೆರಿಗೆ ಕೋಡ್ 2019ರಲ್ಲಿ ಜಾರಿಗೆ ಬರಲಿದೆ ಅಂತಾನೂ ಹೇಳಲಾಗ್ತಿದೆ. ನವೆಂಬರ್ ನಲ್ಲಿ ಸರ್ಕಾರ ಸಮಿತಿ ರಚನೆ ಮಾಡಿದ್ದು, ಹೊಸ ನಿಯಮದ ಸಾಧಕ ಬಾಧಕಗಳ ಬಗ್ಗೆ ವರದಿ ಸಲ್ಲಿಸಲು 6 ತಿಂಗಳುಗಳ ಕಾಲಾವಕಾಶ ನೀಡಿದೆ.

ಸದ್ಯ ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಕೇವಲ ಶೇ.4.5ರಷ್ಟು ಮಂದಿ ಮಾತ್ರ ತೆರಿಗೆ ಪಾವತಿಸುತ್ತಿದ್ದಾರೆ. ಹೊಸ ನೇರ ತೆರಿಗೆ ಕೋಡ್ ಜಾರಿ ಮೂಲಕ ತೆರಿಗೆ ಪಾವತಿದಾರರ ಸಂಖ್ಯೆ ಹೆಚ್ಚಿಸುವ ಉದ್ದೇಶವಿದೆ. ಹೊಸ ನಿಯಮದಲ್ಲಿ ಸಹ ಕೃಷಿ ಆದಾಯಕ್ಕೆ ತೆರಿಗೆ ವಿನಾಯಿತಿ ನೀಡಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...