alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಹೊಸ ನೋಟುಗಳ ಫೋಟೋ…!

ಸಾಮಾಜಿಕ ಜಾಲತಾಣದಲ್ಲಿ 1000, 350 ಹಾಗೂ 5 ರೂಪಾಯಿ ಹೊಸ ನೋಟುಗಳ ಫೋಟೋ ವೈರಲ್ ಆಗಿದೆ. ಆದ್ರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಹಿಂದಷ್ಟೇ ಆರ್ ಬಿ ಐ 200 ರೂಪಾಯಿ ಹಾಗೂ 10 ರೂಪಾಯಿ ಮುಖ ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ 2 ಸಾವಿರ, 500 ಹಾಗೂ 200 ಮತ್ತು 50 ರೂಪಾಯಿ ಮುಖ ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು.

ಫೋಟೋದಲ್ಲಿ ತೋರಿಲಾಗಿರುವ ಸಾವಿರ ಹಾಗೂ 350 ರೂಪಾಯಿ ನೋಟುಗಳು ನಕಲಿ. ಆರ್ ಬಿ ಐ ಸಾವಿರ ರೂಪಾಯಿ ಹಾಗೂ 350 ರೂಪಾಯಿ ಮುಖ ಬೆಲೆಯ ಯಾವುದೇ ನೋಟುಗಳನ್ನು ಜಾರಿಗೆ ತರುವ ಬಗ್ಗೆ ಈವರೆಗೂ ಹೇಳಿಕೆ ನೀಡಿಲ್ಲ. ವೈರಲ್ ಆಗಿರುವ ನೋಟುಗಳು ನಕಲಿ ನೋಟುಗಳಾಗಿವೆ.

5 ರೂಪಾಯಿ ಹೊಸ ನೋಟು ಎಂದು ತೋರಿಸಲಾಗಿರುವ ನೋಟು ಅಸಲಿಗೆ 50 ರೂಪಾಯಿ ನೋಟಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಯಾದ 50 ರೂಪಾಯಿ ನೋಟಿನ ಶೂನ್ಯವನ್ನು ಮರೆಮಾಚಿ 5 ರೂಪಾಯಿ ಹೊಸ ನೋಟು ಎಂದು ಪ್ರಚಾರ ಮಾಡಲಾಗ್ತಿದೆ. ಸೂಕ್ಷ್ಮವಾಗಿ ನೋಡಿದ್ರೆ ಇದ್ರ ಸತ್ಯ ಗೊತ್ತಾಗುತ್ತದೆ.

ಸಾವಿರ ರೂಪಾಯಿ ನೋಟು ಕೂಡ ಫೋಟೋಶೂಟ್. 5 ರೂಪಾಯಿ ನೋಟು ತಯಾರಿಸಲು ಮಾಡಿರುವ ತಪ್ಪನ್ನೇ 1000 ರೂಪಾಯಿ ನೋಟು ತಯಾರಿಸುವಾಗ ಮಾಡಲಾಗಿದೆ. ಹೊಸ ನೋಟಿನ ಬಗ್ಗೆ ಫೇಸ್ಬುಕ್ ಹಾಗೂ ವಾಟ್ಸ್ ಅಪ್ ನಲ್ಲಿ ಸಂದೇಶ ಬಂದ್ರೆ ಅದ್ರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಮಾರುಕಟ್ಟೆಗೆ ಸಾವಿರ ಹಾಗೂ 350 ರೂಪಾಯಿ, 5 ರೂಪಾಯಿಯ ಯಾವುದೇ ಹೊಸ ನೋಟು ಬಂದಿಲ್ಲ ನೆನಪಿರಲಿ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...