alex Certify
ಕನ್ನಡ ದುನಿಯಾ       Mobile App
       

Kannada Duniya

ಶುರುವಾಗ್ತಿದೆ ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್

ಹಬ್ಬದ ಋತುವಿನಲ್ಲಿ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಲು ಫ್ಲಿಪ್ಕಾರ್ಟ್ ಸಿದ್ಧವಾಗಿದೆ. ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಸೇಲ್ ಅಕ್ಟೋಬರ್ 10ರಿಂದ ಶುರುವಾಗಲಿದೆ. ಫ್ಲಿಪ್ಕಾರ್ಟ್ ಗ್ರಾಹಕರನ್ನು ಆಕರ್ಷಿಸಲು ವಿವಿಧ ವಸ್ತುಗಳಿಗೆ ಭರ್ಜರಿ ಆಫರ್ ಹಾಗೂ ಕ್ಯಾಶ್ಬ್ಯಾಕ್ ಸೌಲಭ್ಯ ನೀಡಲಿದೆ.

ಅಕ್ಟೋಬರ್ 10 ರಿಂದ ಅಕ್ಟೋಬರ್ 14 ರವರೆಗೆ ಬಿಗ್ ಬಿಲಿಯನ್ ಸೇಲ್ ನಡೆಯಲಿದೆ. ಮೊಬೈಲ್ ಫೋನ್, ಟಿವಿ, ಫ್ಯಾಶನ್, ಪರ್ಸನಲ್ ಕೇರ್, ಪೀಠೋಪಕರಣಗಳು ಸೇರಿದಂತೆ ಎಲ್ಲ ವಿವಿಧ ವಸ್ತುಗಳಿಗೆ ರಿಯಾಯಿತಿ ನೀಡಲಿದೆಯಂತೆ. ಸುಮಾರು 2 ಕೋಟಿಗೂ ಹೆಚ್ಚು ಮಂದಿ ಫ್ಲಿಪ್ಕಾರ್ಟ್ ಮೂಲಕ ಖರೀದಿ ಮಾಡುವ ಸಾಧ್ಯತೆಯಿದೆ.

ಹಬ್ಬದ ಋತುವಿನಲ್ಲಿ ಫ್ಲಿಪ್ಕಾರ್ಟ್ ಹಾಗೂ ಅಮೆಜಾನ್ ವಹಿವಾಟು ಸುಮಾರು 3 ಅರಬ್ ಡಾಲರ್ ಗಿಂತ ಹೆಚ್ಚಿರಲಿದೆ. ಬಿಗ್ ಬಿಲಿಯನ್ ಸೇಲ್ ನ ಐದನೇ ಆವೃತ್ತಿ ಇದಾಗಿದ್ದು, ಇದನ್ನು ಇನ್ನಷ್ಟು ಉತ್ತಮಗೊಳಿಸುವ ಪ್ರಯತ್ನದಲ್ಲಿ ಫ್ಲಿಪ್ಕಾರ್ಟ್ ಇದೆ. ಫ್ಲಿಪ್ಕಾರ್ಟ್ ಪ್ರತಿಸ್ಪರ್ಧಿ ಅಮೆಜಾನ್ ಇನ್ನೂ ಗ್ರೇಟ್ ಇಂಡಿಯಾ ಫೆಸ್ಟಿವಲ್ ಸೇಲ್ ದಿನಾಂಕವನ್ನು ಘೋಷಣೆ ಮಾಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...