alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನ್ಸೂನ್ ಹಂಗಾಮ ಜೊತೆ ಸಿಗಲಿದೆ ಜಿಯೋ ಫೋನ್-2

ರಿಲಾಯನ್ಸ್ ಇಂಡಸ್ಟ್ರಿಯ 41 ನೇ ವಾರ್ಷಿಕ ಸಭೆ ನಡೆಯುತ್ತಿದೆ. ಮುಂದಿನ ವರ್ಷ ಕಂಪನಿಯಲ್ಲಿ ಪರಿವರ್ತನೆಯಾಗಲಿದೆ ಎಂದು ಮುಕೇಶ್ ಅಂಬಾನಿ ಸಭೆಯಲ್ಲಿ ಹೇಳಿದ್ದಾರೆ. ಕಳೆದ 10 ವರ್ಷ ಕಂಪನಿ ಗಳಿಕೆ ಉತ್ತಮವಾಗಿತ್ತು. ಹೈಡ್ರೋಕಾರ್ಬನ್ ವ್ಯವಹಾರ ಅತಿ ವೇಗದಲ್ಲಿ ಬೆಳೆಯಿತು. ಕಂಪನಿ ಆದಾಯ ಶೇಕಡಾ 20.5 ರಷ್ಟು ಹೆಚ್ಚಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಭಾರತದಲ್ಲಿ ಅತಿ ವೇಗವಾಗಿ ಸೇವೆ ನೀಡುವ ನೆಟ್ವರ್ಕ್ ಆಗಿದೆ. ದೇಶದ ಮೂಲೆ ಮೂಲೆ ಜನರು ಜಿಯೋ ಜೊತೆ ಕೈ ಜೋಡಿಸಿದ್ದಾರೆ. ಒಂದೇ ವರ್ಷದಲ್ಲಿ ಜಿಯೋ ಗ್ರಾಹಕರ ಸಂಖ್ಯೆ ದ್ವಿಗುಣಗೊಂಡಿದೆ. ಜಿಯೋ ಪ್ರತಿ ತಿಂಗಳು ಗ್ರಾಹಕರಿಗೆ 240 ಜಿಬಿ ಡೇಟಾ ನೀಡಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.

ಜಿಯೋ ಫೈಬರ್ ಕನೆಕ್ಟಿವಿಟಿ ಬಗ್ಗೆ ಮಾತನಾಡಿದ ಮುಕೇಶ್ ಅಂಬಾನಿ, ಇದ್ರ ಕೆಲಸ ನಡೆಯುತ್ತಿದೆ. ಫೈಬರ್ ಬ್ರಾಡ್ಬ್ಯಾಂಡ್ ಗೆ ರಿಲಾಯನ್ಸ್ ಹಣ ಹೂಡಿಕೆ ಮಾಡ್ತಿದೆ. ದೇಶದ ಪ್ರತಿ ಮೂಲೆಗೆ ಫೈಬರ್ ಬ್ರಾಡ್ಬ್ಯಾಂಡ್ ಒದಗಿಸುವುದು ನಮ್ಮ ಗುರಿ ಎಂದು ಅವ್ರು ಹೇಳಿದ್ದಾರೆ. ಇದೇ ವೇಳೆ ಆಕಾಶ್ ಅಂಬಾನಿ ಹಾಗೂ ಇಶಾ ಅಂಬಾನಿ ಗೀಗಾ ಫೈಬರ್ ಸರ್ವೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.

ಇದೇ ವೇಳೆ ಜಿಯೋ JioGigaviber ಹೆಸರಿನ ಫೈಬರ್ ಬ್ರಾಡ್ಬ್ಯಾಂಡ್ ಸೇವೆಯನ್ನು ಆರಂಭಿಸಿದೆ. ಇದ್ರಲ್ಲಿ 24 ಗಂಟೆಗಳ ಕಾಲ ತುರ್ತು ಸೇವೆ ಲಭ್ಯವಾಗಲಿದೆ. ಕೈಗೆಟಕುವ ಬೆಲೆಯಲ್ಲಿ ಫೈಬರ್ ಬ್ರಾಡ್ಬ್ಯಾಂಡ್ ಲಭ್ಯವಾಗಲಿದೆ. ಇದಕ್ಕಾಗಿ ಕಂಪನಿ 2.5 ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದೆ. ಇಷ್ಟೇ ಅಲ್ಲ ರಿಲಾಯನ್ಸ್ ಜಿಯೋ ಫೋನ್ -2 ಬಿಡುಗಡೆ ಮಾಡಿದೆ. ಇದ್ರಲ್ಲಿ ಫೇಸ್ಬುಕ್, ವಾಟ್ಸ್ ಅಪ್, ಯುಟ್ಯೂಬ್ ಸೌಲಭ್ಯ ಗ್ರಾಹಕರಿಗೆ ಸಿಗಲಿದೆ.

ಜಿಯೋ ಫೀಚರ್ ಫೋನನ್ನು ಗ್ರಾಹಕರು ಮಾನ್ಸೂನ್ ಹಂಗಾಮಾ ಆಫರ್ ಜೊತೆ ಪಡೆಯಬಹುದಾಗಿದೆ. ಜುಲೈ 21ರಿಂದ ಮಾನ್ಸೂನ್ ಹಂಗಾಮಾ ಆಫರ್ ಲಭ್ಯವಾಗಲಿದೆ. 501 ರೂಪಾಯಿಗೆ ಹಳೆ ಫೋನ್ ಬದಲಾಗಿ ಹೊಸ ಫೋನ್ ಸಿಗಲಿದೆ. ಆಗಸ್ಟ್ 15ರಿಂದ ಜಿಯೋ ಫೋನ್ ಲಭ್ಯವಾಗಲಿದ್ದು, 2999 ರೂಪಾಯಿ ನಿಗದಿಪಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...