alex Certify
ಕನ್ನಡ ದುನಿಯಾ       Mobile App
       

Kannada Duniya

‘ಅಂಟಿಲ್ಲಾ’ ಎದುರಿಗಿನ ಮನೆ ಬೆಲೆ ಎಷ್ಟು ಗೊತ್ತಾ..?

antiliaದೇಶದ ಅತಿ ದೊಡ್ಡ ಸಿರಿವಂತ ಮುಕೇಶ್ ಅಂಬಾನಿಯವರ ಮುಂಬೈ ನಿವಾಸ ‘ಅಂಟಿಲ್ಲಾ’ ಕುರಿತು ಕೇಳದವರಿಲ್ಲ. ಅಲ್ಟಾಮೌಂಟ್ ರಸ್ತೆಯಲ್ಲಿರುವ ‘ಅಂಟಿಲ್ಲಾ’ ದಲ್ಲಿ ಹೆಲಿಪ್ಯಾಡ್ ಸೇರಿದಂತೆ ಹತ್ತಾರು ಸೌಲಭ್ಯಗಳಿವೆ. ಸಿರಿವಂತರಿಗಷ್ಟೇ ಸೀಮಿತವಾಗಿರುವ ಈ ಪ್ರದೇಶದಲ್ಲಿ ಸಹಜವಾಗಿಯೇ ಎಲ್ಲವೂ ದುಬಾರಿ. ಜನ ಸಾಮಾನ್ಯರಿಗಿರಲಿ ಮೇಲ್ಮಧ್ಯಮ ವರ್ಗದವರೂ ಇಲ್ಲಿ ಮನೆ ಇರಲಿ ಖಾಲಿ ನಿವೇಶನವನ್ನೂ ಖರೀದಿಸುವುದು ಕೈಗೆಟುಕದ ಮಾತು.

ಇದೀಗ ಮುಕೇಶ್ ಅಂಬಾನಿಯವರ ‘ಅಂಟಿಲ್ಲಾ’ ಎದುರಿಗಿನ ಫ್ಲಾಟ್ ಒಂದು ಬರೋಬ್ಬರಿ 125 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದೆ. ಸ್ಮಾರ್ಟ್ ಕಾರ್ಡ್ ಐಟಿ ಸಲ್ಯೂಶನ್ಸ್ ಲಿಮಿಟೆಡ್ ನ ಮ್ಯಾನೇಜಿಂಗ್ ಡೈರೆಕ್ಟರ್ ದೇವನ್ ಮೆಹ್ತಾ, ಪ್ರತಿ ಚದರಡಿಗೆ 1,47,000 ರೂ. ನೀಡಿ ಈ ಫ್ಲಾಟ್ ಖರೀದಿಸಿದ್ದಾರೆ. ಈ ಹಿಂದೆ ಅಮೆರಿಕನ್ ರಾಯಭಾರ ಕಛೇರಿಯಿದ್ದ ಸ್ಥಳದಲ್ಲಿ ರಿಯಲ್ ಎಸ್ಟೇಟ್ ಕಂಪನಿ ಲೋಧಾ ಗ್ರೂಪ್ ಅಪಾರ್ಟ್ಮೆಂಟ್ ನಿರ್ಮಿಸಿದೆ.

40 ಅಂತಸ್ತಿನ ಲೋಧಾ ಅಲ್ಟಾಮೌಂಟ್ ನ್ನು Billionaire’s Avenue ಎಂದೂ ಕರೆಯಲಾಗುತ್ತಿದ್ದು, ಆಗರ್ಭ ಶ್ರೀಮಂತರು ಮಾತ್ರ ಇಲ್ಲಿ ಫ್ಲಾಟ್ ಖರೀದಿಸಲು ಸಾಧ್ಯ. ಕುಮಾರ ಮಂಗಳಂ ಬಿರ್ಲಾ, ನರೋತ್ತಮ್ ಶೆಕ್ಸಾರಿಯಾ, ರಾಧಾಕೃಷ್ಣನ್ ದಮಾನಿ ಮೊದಲಾದವರು ಇಲ್ಲಿಯೇ ವಾಸವಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...