alex Certify
ಕನ್ನಡ ದುನಿಯಾ       Mobile App
       

Kannada Duniya

ವಿಜಯ್ ಮಲ್ಯರ ವಿಮಾನ ಕಾಯಲು ಖರ್ಚಾಗ್ತಿರೋ ಹಣವೆಷ್ಟು ಗೊತ್ತಾ?

ದೇಶದ ವಿವಿಧ ಬ್ಯಾಂಕುಗಳಿಗೆ ಸಾವಿರಾರು ಕೋಟಿ ರೂ. ಉಂಡೆನಾಮ ತಿಕ್ಕಿ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ, ಲಂಡನ್ ನಲ್ಲಿ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ.

ಇತ್ತ ಭಾರತದ ತೆರಿಗೆ ಇಲಾಖೆ 2013 ರಲ್ಲಿ ವಿಜಯ್ ಮಲ್ಯ ಅವರ ಸ್ವಂತ ಬಳಕೆಗೆ ಮೀಸಲಾಗಿದ್ದ ಐಷಾರಾಮಿ ಏರ್ ಬಸ್ A319 ವಿಮಾನವನ್ನು 1000 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡ ಕಾರಣಕ್ಕೆ ವಶಪಡಿಸಿಕೊಂಡಿತ್ತು.

ಸರ್ಕಾರದ ಇಲಾಖೆಯೇ ವಶಪಡಿಸಿಕೊಂಡಿರುವುದರಿಂದ ಮುಂಬೈ ಏರ್ಪೋರ್ಟ್ ನಲ್ಲಿ ಈ ವಿಮಾನವನ್ನು ಯಾವುದೇ ಹಣ ಪಡೆಯದೆ ಕಾಯಬೇಕಾಗಿ ಬಂದಿದ್ದು, ಇದಕ್ಕಾಗಿ ಮುಂಬೈ ಏರ್ಪೋರ್ಟ್ ಗಂಟೆಗೆ 15 ಸಾವಿರ ರೂ. ಖರ್ಚು ಮಾಡುತ್ತಿದೆ.

ಕಳೆದ 5 ವರ್ಷಗಳಿಂದ ಈವರೆಗೆ ಒಟ್ಟು 10 ಕೋಟಿ ರೂ. ಹಣವನ್ನ ಇದಕ್ಕೆ ವೆಚ್ಚ ಮಾಡಲಾಗಿದ್ದು, ಮುಂಬೈ ಏರ್ಪೋರ್ಟ್ ಅಧಿಕಾರಿಗಳು ಈಗ ಈ ವಿಚಾರದ ಕುರಿತು ಬಾಂಬೆ ಹೈಕೋರ್ಟ್ ಮೊರೆ ಹೋಗಿದ್ದಾರೆ. ತಮ್ಮ ಜಾಗದಿಂದ ವಿಮಾನವನ್ನು ತೆರವುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...