alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ಹೊಟೇಲ್ ನಲ್ಲಿಯೇ ಸಿಗಲಿದೆ ಬೋರ್ಡಿಂಗ್ ಪಾಸ್

ವಿಮಾನ ನಿಲ್ದಾಣದಲ್ಲಿ ಲಗೇಜ್ ಚೆಕ್ ಇನ್ ಹಾಗೂ ಬೋರ್ಡಿಂಗ್ ಪಾಸ್ ಪಡೆಯಲು ಇನ್ಮುಂದೆ ಉದ್ದದ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ. ಹೊಟೇಲ್ ನಲ್ಲಿಯೇ ಲಗೇಜ್ ಚೆಕ್ ಇನ್ ಹಾಗೂ ಬೋರ್ಡಿಂಗ್ ಪಾಸ್ ಪಡೆಯಬಹುದಾಗಿದೆ. ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಈ ಸೌಲಭ್ಯ ಸಿಗಲಿದೆ.

ಮುಂಬೈನ ಪ್ರಮುಖ ಹೊಟೇಲ್ ಗಳಲ್ಲಿ ಈಗಾಗಲೇ ಈ ಸೌಲಭ್ಯ ಜಾರಿಯಾಗಿದೆ. ಪ್ರಯಾಣಿಕರ ಪ್ರತಿಕ್ರಿಯೆ ಆಧಾರದ ಮೇಲೆ ಮುಂಬೈನ ಇತರ ಹೊಟೇಲ್ ಗಳಿಗೂ ಸೇವೆ ವಿಸ್ತರಣೆಯಾಗಲಿದೆ. ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮುಖ್ಯ ಅಧಿಕಾರಿಗಳ ಪ್ರಕಾರ ಲಗೇಜ್ ಚೆಕ್ ಇನ್ ಹಾಗೂ ಬೋರ್ಡಿಂಗ್ ಪಾಸ್ ವ್ಯವಸ್ಥೆ ಮುಂಬೈನ 6 ಪ್ರಮುಖ ಹೊಟೇಲ್ ಗಳಲ್ಲಿ ಶುರುವಾಗಿದೆ.

ಆರು ಹೊಟೇಲ್ ಗಳಲ್ಲಿ ತಂಗಿರುವ ಪ್ರಯಾಣಿಕರಿಗೆ ಹೊಟೇಲ್ ನಲ್ಲಿಯೇ ಲಗೇಜ್ ಚೆಕ್ ಇನ್ ಹಾಗೂ ಬೋರ್ಡಿಂಗ್ ಪಾಸ್ ಸಿಗಲಿದೆ. ಇದ್ರಿಂದ ಸಮಯ ಉಳಿಯುವ ಜೊತೆಗೆ ಉದ್ದುದ್ದದ ಸಾಲಿನಲ್ಲಿ ನಿಲ್ಲುವುದು ತಪ್ಪುತ್ತದೆ. ಆರು ಹೊಟೇಲ್ ನಲ್ಲಿಯೂ ಕಿಯೋಸ್ಕ್ ಇರಿಸಲಾಗಿದೆ. ಪ್ರಯಾಣಿಕರು ಇ-ಟಿಕೆಟ್ ನ ಪಿಎನ್ಆರ್ ಸಂಖ್ಯೆಯನ್ನು ನಮೂದಿಸಬೇಕು. ನಂತ್ರ ಪ್ರಯಾಣಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಡಿಸ್ಪೇ ಆಗುತ್ತದೆ. ನಂತ್ರ ಬ್ಯಾಗೇಜ್ ವಿವರ ನೀಡಬೇಕು. ಪರೀಕ್ಷೆ ನಂತ್ರ ಬ್ಯಾಗೇಜ್ ಟ್ಯಾಗ್ ಹಾಗೂ ಬೋರ್ಡಿಂಗ್ ಪಾಸ್ ಪ್ರಯಾಣಿಕರ ಕೈ ಸೇರುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...