alex Certify
ಕನ್ನಡ ದುನಿಯಾ       Mobile App
       

Kannada Duniya

‘ಭೀಮ್’ ಆಪ್ ಬಳಕೆದಾರರು ಮಿಸ್ ಮಾಡ್ದೇ ಓದಿ ಈ ಸುದ್ದಿ

ಇತ್ತೀಚೆಗೆ ಭಾರತದಲ್ಲಿ ಹೆಚ್ಚು ಪ್ರಭಾವಶಾಲಿ ಹಣ ವರ್ಗಾವಣೆ ಮಾಧ್ಯಮ ಭೀಮ್ ಆಪ್ ಎಂದು ಹೆಸರಾಗಿದೆ. ಆದರೆ, ಆ್ಯಪ್ ಗೆ ಸಂಬಂಧಿಸಿದ ಕಸ್ಟಮರ್ ಕೇರ್ ಬಗ್ಗೆ ಜನತೆ ಹೆಚ್ಚು ಜಾಗೃತರಾಗಿರುವುದು ಅವಶ್ಯ. ಏಕೆಂದರೆ ನಕಲಿ ಕಸ್ಟಮರ್ ಕೇರ್ ಸಂಖ್ಯೆ ನೀಡಿ ವ್ಯಕ್ತಿಯೊಬ್ಬ ವಂಚನೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಒಂದು ನಿರ್ದಿಷ್ಟ ಫೋನ್ ಸಂಖ್ಯೆ ಬಳಸಿಕೊಂಡು ದೇಶಾದ್ಯಂತ ಜನರನ್ನು ಮೋಸ ಮಾಡಿರುವ ಬಗ್ಗೆ ಪೊಲೀಸರಿಗೆ ಸಂಶಯ ವ್ಯಕ್ತವಾಗಿದ್ದು, ಮುಂಬೈ ಪೊಲೀಸರು ಬಲೆ ಬೀಸಿದ್ದಾರೆ.

ಗುಜರಾತ್ ಮೂಲದ ಅನಿಲ್ ಚತುರ್ವೇದಿ ಎಂಬುವರು ತಮ್ಮ ಸಂಬಂಧಿಗೆ 10 ಸಾವಿರ ರೂಪಾಯಿಯನ್ನು ಭೀಮ್ ಆಪ್ ಮೂಲಕ ರವಾನಿಸಿದ್ದರು. ಆದರೆ, ಹಣ ಜಮೆ ಆಗಿರಲಿಲ್ಲ. ಈ ಕಾರಣಕ್ಕೆ ಆನ್ ಲೈನ್ ನಲ್ಲಿ ಹುಡುಕಿ ವೆಬ್ ಸೈಟ್ ನಲ್ಲಿದ್ದ ಕಸ್ಟಮರ್ ಕೇರ್ ನಂಬರ್‌ ಒಂದಕ್ಕೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ವ್ಯಕ್ತಿ ಸೂಕ್ತ ಮಾಹಿತಿ ನೀಡಿ, ತಾಂತ್ರಿಕ ಸಮಸ್ಯೆ ಇದೆ ಎಂದು ಹೇಳಿದ್ದಾನೆ. ಜತೆಗೆ ನಾಲ್ಕು ನೋಟಿಫಿಕೇಶನ್ ಅಕ್ಸೆಪ್ಟ್ ಮಾಡುವಂತೆ ಆ ವ್ಯಕ್ತಿ ಸೂಚಿಸಿದ್ದಾನೆ. ಅದರಂತೆಯೇ ಅನಿಲ್ ಪಾಲಿಸಿದ್ದಾರೆ.

ಬಳಿಕ ಅವರ ಖಾತೆಯಲ್ಲಿದ್ದ 40 ಸಾವಿರ ರೂಪಾಯಿ ಕಡಿತವಾಗಿದ್ದು ಗಮನಕ್ಕೆ ಬಂದಿದೆ. ಆಗ ತಾನು ವಂಚನೆಗೊಳಗಾಗಿರುವುದರ ಅರಿವಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಎಫ್ಐಆರ್ ದಾಖಲಿಸಿರುವ ವರ್ಸೋವಾ ಪೊಲೀಸರು ಶೀಘ್ರವೇ ವಂಚಕನನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...